Kannada Translation

Ayah by Ayah

Tags

Download Links

Kannada Translation translation for Surah Al-'Adiyat — Ayah 7

100:7
وَإِنَّهُۥ عَلَىٰ ذَٰلِكَ لَشَهِيدٞ ٧
ಅವನ ಕೃತಘ್ನತೆಗೆ ಅವನೇ ಸಾಕ್ಷಿಯಾಗಿದ್ದಾನೆ1.
Footnotes
  • [1] ಸೂಕ್ತದಲ್ಲಿರುವ `ಇನ್ನಹೂ' ಎಂಬುದರ ಸರ್ವನಾಮ ಪದವು ಅಲ್ಲಾಹು ಎಂಬುದಕ್ಕೂ ಮನುಷ್ಯನು ಎಂಬುದಕ್ಕೂ ಮರಳಲು ಸಾಧ್ಯತೆಯಿದೆ. ಮೊದಲನೆಯ ಸಾಧ್ಯತೆ ಪ್ರಕಾರ ಸೂಕ್ತದ ತಾತ್ಪರ್ಯ ಅಲ್ಲಾಹು ಸಾಕ್ಷಿಯಾಗಿದ್ದಾನೆ ಎಂದಾಗುತ್ತದೆ. ಅಂದರೆ ಮನುಷ್ಯನು ಮಾಡುವ ಎಲ್ಲಾ ದುಷ್ಕøತ್ಯ ಹಾಗೂ ಸತ್ಯನಿಷೇಧವನ್ನು ಅಲ್ಲಾಹನು ಸದಾ ವೀಕ್ಷಿಸುತ್ತಿರುವನು. ಅವನಿಗೆ ತಿಳಿಯದೆ ಯಾವುದೇ ಕಾರ್ಯವನ್ನು ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂಬ ಎಚ್ಚರಿಕೆಯನ್ನು ನೀಡಲಾಗಿದೆ. ಎರಡನೆಯ ಸಾಧ್ಯತೆಯ ಪ್ರಕಾರ ಸೂಕ್ತದ ಅರ್ಥ ಮನುಷ್ಯನೇ ಸಾಕ್ಷಿಯಾಗಿದ್ದಾನೆ ಎಂದಾಗುತ್ತದೆ. ಅಂದರೆ ಮನುಷ್ಯನು ಮಾಡುವ ಸತ್ಯನಿಷೇಧ ಹಾಗೂ ದುಷ್ಕøತ್ಯಗಳು ಸುವ್ಯಕ್ತ ಕಾರ್ಯವಾಗಿದೆ. ಅದನ್ನು ನಿಷೇಧಿಸಲು ಅವನಿಗೆ ಸಾಧ್ಯವಾಗಲಾರದು. ಅದೇ ರೀತಿ ಪರಲೋಕದಲ್ಲಿ ಮನುಷ್ಯನ ಶರೀರವು ಅವನ ಎಲ್ಲಾ ಕೃತಘ್ನತೆಗಳಿಗೆದುರಾಗಿ ಸಾಕ್ಷಿ ನಿಲ್ಲುವುದು. ಈ ಅರ್ಥದಲ್ಲಿ ಮನುಷ್ಯನು ತನ್ನ ಕೃತಘ್ನತೆಯ ಮೇಲೆ ಸಾಕ್ಷಿಯಾಗಿರುವನು ಎಂದು ತಿಳಿಸಲಾಗಿದೆ.