Kannada Translation

Ayah by Ayah

Tags

Download Links

Kannada Translation translation for Surah At-Takathur — Ayah 2

102:2
حَتَّىٰ زُرۡتُمُ ٱلۡمَقَابِرَ ٢
ನೀವು ಸಮಾಧಿಗಳನ್ನು ಸಂದರ್ಶಿಸುವವರೆಗೆ1.
Footnotes
  • [1] ಅರ್ಥಾತ್ ನೀವು ಮೃತರಾಗಿ ಸಮಾಧಿ ಹೊಂದುವವರೆಗೆ ಅಥವಾ ನೀವು ಗೋರಿ ಸಂದರ್ಶನ ಮಾಡುವವರೆಗೆ. ಪವಿತ್ರ ಕುರ್‍ಆನಿನಲ್ಲಿ ಗೋರಿಗಳ ಪ್ರಸ್ತಾಪ ವಿರುವುದು ಈ ಅಧ್ಯಾಯದಲ್ಲಿ ಮಾತ್ರವಾಗಿದೆ. ಗೋರಿ ಸಂದರ್ಶನವು ಕಠಿಣ ಹೃದಯಕ್ಕೆ ಪರಿಣಾಮಕಾರಿ ಔಷಧವಾಗಿದೆ. ಏಕೆಂದರೆ ಅದು ಮರಣ ಹಾಗೂ ಪರಲೋಕವನ್ನು ನೆನಪಿಸುತ್ತದೆ. ಅದು ವ್ಯಾಮೋಹಗಳ ಕಡಿತ, ಐಹಿಕ ವಿರಕ್ತಿ ಹಾಗೂ ಲೌಕಿಕ ನಿರ್ಮೋಹವನ್ನು ಪ್ರೇರೇಪಿಸುತ್ತದೆ. ಪ್ರವಾದಿವರ್ಯ ರು ಹೀಗೆ ಹೇಳಿರುವರು; ನಿಮಗೆ ನಾನು ಗೋರಿ ಸಂದರ್ಶನವನ್ನು ತಡೆದಿದ್ದೆ. ಇನ್ನು ನೀವು ಗೋರಿ ಸಂದರ್ಶನವನ್ನು ಮಾಡಿರಿ. ಏಕೆಂದರೆ ಅದು ಐಹಿಕ ವಿರಕ್ತಿ ಯನ್ನು ತರುತ್ತದೆ. ಹಾಗೂ ಪರಲೋಕವನ್ನು ನೆನಪಿಸುತ್ತದೆ. ಇಬ್ನು ಮಸ್‍ಊದ್ ವರದಿ ಮಾಡಿದ ಈ ಹದೀಸನ್ನು ಇಬ್ನು ಮಾಜ ಉಲ್ಲೇಖಿಸಿದ್ದಾರೆ. (ಕುರ್ತುಬಿ)