Kannada Translation

Ayah by Ayah

Tags

Download Links

Kannada Translation translation for Surah At-Takathur — Ayah 4

102:4
ثُمَّ كـَلَّا سَوۡفَ تَعۡلَمُونَ ٤
ಎಚ್ಚರವಿರಲಿ! ನಂತರ (ಸಮಾಧಿಯೊಳಗೆ) ನೀವು ತಿಳಿಯಲಿದ್ದೀರಿ1.
Footnotes
  • [1] ಭೌತಿಕ ಸೊತ್ತು-ಸ್ಥಾನಗಳೇ ಎಲ್ಲಾ ಸ್ಥಾನಮಾನದ ಮಾನದಂಡವಾಗಿ ಕಾಣುವ ಮನುಷ್ಯನಿಗೆ ಮರಣದ ವೇಳೆ ಮತ್ತು ಅದರ ಬಳಿಕ ಅದು ವ್ಯರ್ಥ ಹಾಗೂ ಮಿಥ್ಯವೆಂದು ತಿಳಿಯುತ್ತಾ ಹೋಗುವುದು. ಈ ತಿಳುವಳಿಕೆಯು ಮರಣಾನಂತರ ಜೀವನದ ಪ್ರತಿಯೊಂದು ಹಂತದಲ್ಲಿ ವೃದ್ಧಿಸುತ್ತಾ ಹೋಗುವುದು. ಮರಣ, ಖಬರಿನ ವಿಚಾರಣೆ, ಪುನರ್ಜೀವನ, ಮಹ್‍ಶರ್‍ನೆಡೆಗೆ ಪ್ರಯಾಣ, ಅಲ್ಲಿಯ ಸುದೀರ್ಘ ನಿಲ್ಲುವಿಕೆ, ಅಲ್ಲಾಹನ ವಿಚಾರಣೆ, ಸ್ವರ್ಗ, ನರಕ ಹೀಗೆ ಪ್ರತಿಯೊಂದು ಘಟ್ಟಗಳಲ್ಲಿ ಭೌತಿಕ ಪ್ರಪಂಚದಲ್ಲಿ ತಾನು ಸ್ವೀಕರಿಸಿ ಕಾರ್ಯಗತಗೊಳಿಸಿದ ನಿಲುವು ತಪ್ಪಾಗಿತ್ತೆಂಬ ದೃಢಜ್ಞಾನ ಪ್ರಾಪ್ತವಾಗುತ್ತಾ ಹೋಗುವುದು. ಈ ಕಾರಣಕ್ಕಾಗಿ ನಂತರವೂ ನೀವು ತಿಳಿಯಲಿಕ್ಕಿದ್ದೀರಿ ಎಂದು ಆವರ್ತಿಸಿ ಹೇಳಲಾಗಿದೆ.