Kannada Translation

Ayah by Ayah

Tags

Download Links

Kannada Translation translation for Surah Al-'Asr — Ayah 1

103:1
وَٱلۡعَصۡرِ ١
ಕಾಲದ ಆಣೆ !1
Footnotes
  • [1] *`ಅಸ್ವ್‍ರ್' ಎಂದರೆ ಕಾಲ ಎಂದರ್ಥ. ವಿಸ್ಮಯ ವೈವಿಧ್ಯಗಳ ಮೇಲೆ ಕಾಲವು ಅಚ್ಛಾದಿಸಲ್ಪಟ್ಟಿರುವುದರಿಂದ ಕಾಲವನ್ನು ಹಿಡಿದು ಆಣೆ ಹಾಕುತ್ತ ಈ ಅಧ್ಯಾಯವನ್ನು ಪ್ರಾರಂಭಿಸಲಾಗಿದೆ. ಅಸ್ರ್ ಎಂಬುದಕ್ಕೆ ಸಂಧ್ಯಾ ಸಮಯ ಎಂದೂ ಅರ್ಥವಿದೆ. ಅದರಲ್ಲಿ ಅಲ್ಲಾಹನ ಅನಂತ ಶಕ್ತಿಯ ನಿದರ್ಶನ ಹಾಗೂ ಪ್ರಬುದ್ಧ ಉಪದೇಶ ಅಡಗಿರುವುದರಿಂದ ಆ ಸಮಯವನ್ನು ಹಿಡಿದು ಆಣೆ ಹಾಕಲಾಗಿದೆ. (ಅಲ್ ಬಹ್ರ್ 8/509) ಕಾಲ ಎಂದು ಹೇಳುವಾಗ ಪ್ರಥಮವಾಗಿ ನಮ್ಮ ಗಮನಕ್ಕೆ ಬರುವುದು ಗತಕಾಲವಾಗಿದೆ. ಅಂದರೆ ಇಲ್ಲಿಯವರೆಗೆ ಕಳೆದು ಹೋದ ಕಾಲವು ಮುಂದಿನ ಸೂಕ್ತದಲ್ಲಿ ತಿಳಿಸುವ `ಮನುಷ್ಯರು ಪರಾಜಿತರು' ಎಂಬುದಕ್ಕೆ ಸಾಕ್ಷಿಯಾಗಿದೆ. ಕಳೆದು ಹೋದ ಕಾಲವನ್ನು ಮೆಲುಕು ಹಾಕುವಾಗ ಅಥವಾ ಅದರ ಚರಿತ್ರೆಯನ್ನು ಅವಲೋಕಿಸುವಾಗ ಈ ಕಾರ್ಯವು ಸ್ಪಷ್ಟವಾಗುವುದು.