Kannada Translation

Ayah by Ayah

Tags

Download Links

Kannada Translation translation for Surah Al-Fil — Ayah 5

105:5
فَجَعَلَهُمۡ كَعَصۡفٖ مَّأۡكُولِۭ ٥
ಹಾಗೆ ಅವರನ್ನು ತಿಂದುಳಿದ ಬೈಹುಲ್ಲಿನಂತೆ ಮಾಡಿದನು1.
Footnotes
  • [1] ಈ ಘಟನೆ ನಡೆದದ್ದು ಪ್ರವಾದಿವರ್ಯ ರವರು ಜನಿಸುವುದಕ್ಕಿಂತ ಐವತ್ತು ದಿವಸಗಳ ಮುಂಚೆ. ಇತಿಹಾಸದಲ್ಲಿ ಈ ವರ್ಷ `ಆಮುಲ್ ಫೀಲ್' (`ಗಜ ವರ್ಷ') ಎಂದು ಕರೆಯಲ್ಪಡುತ್ತದೆ. ಯಮನಿನ ಕ್ರೈಸ್ತರಾಜ ಅಬ್ರಹಃ ಅಶ್ರಮನು `ಸನ್‍ಆ’ದಲ್ಲಿ ಬೃಹತ್ ಇಗರ್ಜಿಯೊಂದನ್ನು ಕಟ್ಟಿಸಿದನು. ಹಜ್ಜ್ ಯಾತ್ರಿಕರನ್ನು ಬಲವಂತವಾಗಿ ಅದರೆಡೆಗೆ ಆಕರ್ಷಿಸುವುದು ಆತನ ಉದ್ದೇಶವಾಗಿತ್ತು. ಆದರೆ ಕಿನಾನಃ ಗೋತ್ರದ ಓರ್ವ ವ್ಯಕ್ತಿ ಅಲ್ಲಿ ಹೇಸಿಗೆ ಮಾಡಿದನು. ಇದರಿಂದ ಕೆರಳಿದ ಅಬ್ರಹಃನು ಕಅïಬ ಭವನವನ್ನು ಕೆಡವಿ ಹಾಕುವುದಾಗಿ ಶಪಥ ತೊಟ್ಟನು. ಹಾಗೆ ಅವನು ಅರವತ್ತು ಸಾವಿರದ ಬೃಹತ್ ಸೇನೆಯೊಂದಿಗೆ ಮಕ್ಕಾಕೆ ದಂಡೆತ್ತಿ ಬಂದನು. ಸೇನೆಯ ಮುಂಪಕ್ತಿಯಲ್ಲಿ ಅನೇಕ ಆನೆಗಳಿದ್ದವು. ಮಕ್ಕಾದ ಹತ್ತಿರ ತಲುಪಿದಾಗ ಊರಿನ ಜನರು ಭಯದಿಂದ ಪರ್ವತಗಳ ಕಡೆಗೆ ಓಡಿ ಪಾರಾದರು. ಅಲ್ಲಾಹನು ಅಬ್ರಹಃನ ಸೇನೆಯ ಮೇಲೆ ಕಪ್ಪು ಪಕ್ಷಿಗಳನ್ನು ಕಳುಹಿಸಿದನು. ಪ್ರತಿಯೊಂದು ಪಕ್ಷಿಯ ಕೊಕ್ಕಿನಲ್ಲಿ ಒಂದು ಕಲ್ಲು ಹಾಗೂ ಕಾಲುಗಳಲ್ಲಿ ಎರಡು ಕಲ್ಲುಗಳನ್ನು ಹಿಡಿದುಕೊಂಡಿದ್ದವು. ಅವು ಸೇನೆಯ ಮೇಲೆ ಕಲ್ಲುಗಳ ಮಳೆಗರೆದವು. ಕಲ್ಲು ವ್ಯಕ್ತಿಯ ತಲೆಗೆ ಹೊಕ್ಕು ಗುಧದಿಂದ ಹೊರಬರುತ್ತಿತ್ತು. ಹೀಗೆ ಸಮಸ್ತ ಸೇನೆ ಸರ್ವನಾಶವಾಯಿತು. ಈ ಘಟನೆಯು ಜನರಿಗೆ ಪಾಠಭೋಧಕ ಸಂಕೇತವಾಗಿ ಉಳಿಯಿತು. ಇದು ನಡೆದದ್ದು ಅರಫಾದ ಹತ್ತಿರವಿರುವ ಸ್ಥಳದಲ್ಲಾಗಿದೆ. ಮಿನಾ ಮತ್ತು ಮುಝ್ದಲಿಫಾದ ಮಧ್ಯೆ ಇರುವ ಮುಹಸ್ಸಿರ್ ಕಣಿವೆಯಲ್ಲಾಗಿದೆಯೆಂದೂ ಅಭಿಪ್ರಾಯವಿದೆ. (ರಾಝಿ 31/96)