Kannada Translation

Ayah by Ayah

Tags

Download Links

Kannada Translation translation for Surah Al-Kawthar — Ayah 1

108:1
إِنَّآ أَعۡطَيۡنَٰكَ ٱلۡكَوۡثَرَ ١
ತಮಗೆ ನಾವು ಖಂಡಿತ ‘ಅಲ್ ಕೌಸರ್’ ಅನ್ನು ನೀಡಿರುತ್ತೇವೆ1.
Footnotes
  • [1] *ಈ ಅಧ್ಯಾಯದ ಪ್ರಥಮ ಸೂಕ್ತದಲ್ಲಿ `ಕೌಸರ್' ಎಂಬ ಪದ ಬಂದಿರುವುದರಿಂದ ಈ ನಾಮಕರಣ. ಇಹ-ಪರಗಳಲ್ಲಿ ಪ್ರವಾದಿವರ್ಯ ರಿಗೆ ಯಥೇಷ್ಟ ಅನುಗ್ರಹಗಳು ದೊರೆಯುವ ಬಗ್ಗೆ ಇದರಲ್ಲಿ ಪ್ರಸ್ತಾಪವಿದೆ. ಕೌಸರ್ ಎಂದರೆ ಭಾಷಾರ್ಥದಲ್ಲಿ ಅತ್ಯಧಿಕ ಒಳಿತುಗಳು ಎಂದರ್ಥ. ಇದರ ವ್ಯಾಪ್ತಿಯಲ್ಲಿ ಪ್ರವಾದಿವರ್ಯ ರಿಗೆ ನೀಡಲಾದ ಅನಂತವಾದ ಒಳಿತುಗಳೆಲ್ಲವೂ ಒಳಪಡುತ್ತದೆ. ಪ್ರವಾದಿವರ್ಯ ರಿಗೆ ನೀಡಲಾದ ಎರಡು ಹೌಳುಲ್ ಕೌಸರ್‍ಗಳು (ಒಂದು ಮಹ್‍ಶರ್‍ನಲ್ಲಿ, ಇನ್ನೊಂದು ಸ್ವರ್ಗದಲ್ಲಿ), ಪ್ರವಾದಿತ್ವ, ಖುರ್‍ಆನ್, ದಿವ್ಯಸಂದೇಶ, ಅಹ್ಲುಬೈತ್‍ಗಳೆಂಬ ಭವ್ಯವಾದ ಸಂತಾನ ಪರಂಪರೆ, ವಿದ್ವಾಂಸರು ಹಾಗೂ ಔಲಿಯಾಗಳನ್ನೊಳಗೊಂಡ ಬೃಹತ್ ಸಮುದಾಯ, ಅದ್ಭುತ ಸಿದ್ದಿಗಳು, ವಿದ್ಯೆ ಮುಂತಾದ ಎಲ್ಲಾ ಒಳಿತುಗಳು ಇದರ ವ್ಯಾಪ್ತಿಯಲ್ಲಿ ಬರುತ್ತದೆ. (ಅಲ್-ಬಹ್ರ್ 8/519)