Kannada Translation

Ayah by Ayah

Tags

Download Links

Kannada Translation translation for Surah Al-Masad — Ayah 4

111:4
وَٱمۡرَأَتُهُۥ حَمَّالَةَ ٱلۡحَطَبِ ٤
(ಅವನೊಂದಿಗೆ) ಕಟ್ಟಿಗೆ ಹೊರುವ ಅವನ ಪತ್ನಿಯೂ ಕೂಡ1.
Footnotes
  • [1] ಹರ್‍ಬ್ ಎಂಬವನ ಪÀÅತ್ರಿಯೂ ಅಬೂಸುಫ್‍ಯಾನರ ಸಹೋದರಿಯೂ ಆಗಿದ್ದ ಈಕೆಯ ಹೆಸರು ಉಮ್ಮು ಜಮೀಲ್ ಎಂದಾಗಿದೆ. ಆಕೆ ಜನರೆಡೆಯಲ್ಲಿ ಕಲಹವನ್ನುಂಟುಮಾಡಲು ಪರಸ್ಪರ ಚಾಡಿ ಹೇಳುವವಳಾಗಿದ್ದಳು. ಚಾಡಿ ಹೇಳುವವರನ್ನು ಅರಬರು ಸಾಮಾನ್ಯವಾಗಿ ಕಟ್ಟಿಗೆ ಹೊರುವವರೆಂದು ಹೇಳುತ್ತಿದ್ದರು. ಆದರೆ ಖತಾದಃ ರವರ ಪ್ರಕಾರ ಅವಳ ಕೈಯಲ್ಲಿ ಧಾರಾಳ ಹಣವಿದ್ದರೂ ಜಿಪುಣತೆಯಿಂದ ಆಕೆ ಕಟ್ಟಿಗೆಯನ್ನು ಇತರರಿಂದ ಹೊರಿಸದೆ ಸ್ವತಃ ಅವಳೇ ಹೊರುತ್ತಿದ್ದಳು. ಇಬ್ನ್‍ಝೈದ್, ಳಹ್ಹಾಕ್ ರವರ ಪ್ರಕಾರ ನಬಿವರ್ಯ ರು ಹಾದು ಹೋಗುವ ದಾರಿಯಲ್ಲಿ ರಾತ್ರಿ ಹೊತ್ತು ಮುಳ್ಳುಗಳ ರಾಶಿಯನ್ನು ಹೊತ್ತು ತಂದು ಮಣ್ಣಿನಡಿಯಲ್ಲಿ ಹೂತಿಡುತ್ತಿದ್ದ ಉಮ್ಮು ಜಮೀಲ್, ನಬಿ ರವರಿಗೆ ದೈಹಿಕ ಹಿಂಸೆ ನೀಡುವ ಪ್ರಯತ್ನದಲ್ಲಿ ವಿಕೃತ ಆನಂದವನ್ನು ಅನುಭವಿಸುತ್ತಿದ್ದಳು. ಆದ್ದರಿಂದ ಈಕೆಯನ್ನು `ಕಟ್ಟಿಗೆ ಹೊರುವವಳು' ಎನ್ನಲಾಗಿದೆ. 1138