Kannada Translation

Ayah by Ayah

Tags

Download Links

Kannada Translation translation for Surah Al-Falaq — Ayah 1

113:1
قُلۡ أَعُوذُ بِرَبِّ ٱلۡفَلَقِ ١
(ಪ್ರವಾದಿಯವರೇ) ಹೇಳಿರಿ, ಪ್ರಭಾತದ ಪಾಲಕ ಪ್ರಭುವಿನೊಂದಿಗೆ ನಾನು ಅಭಯ ಯಾಚಿಸುತ್ತೇನೆ1.
Footnotes
  • [1] * `ಫಲಕ್ವ್' ಎಂದರೆ ಪ್ರಭಾತ ಎಂದರ್ಥ. ಈ ಅಧ್ಯಾಯದ ಪ್ರಥಮ ಸೂಕ್ತದಲ್ಲೇ ಈ ಪದ ಬಂದಿದೆ. ಇದಕ್ಕೂ ಇದರ ಮುಂದಿನ ಅಧ್ಯಾಯಕ್ಕೂ ಒಟ್ಟಾಗಿ `ಮುಅವ್ವಿದ್ಸತೈನಿ' ಎಂದು ಹೇಳಲಾಗುತ್ತದೆ. ರಕ್ಷಣೆ ಕೊಡುವ ಅಧ್ಯಾಯಗಳು ಎಂದರ್ಥ. ಭಾಷಾರ್ಥ ಪ್ರಕಾರ ಫಲಕ್ವ್ ಎಂದರೆ ಸೀಳುವುದು ಎಂದಾಗಿದೆ. ಬಹುತೇಕ ವಿದ್ವಾಂಸರು ಇದಕ್ಕೆ ನೀಡಿದ ಅರ್ಥ ಪ್ರಭಾತ ಎಂದಾಗಿದೆ. ಪ್ರಭಾತವು ರಾತ್ರಿಯ ಕತ್ತಲನ್ನು ಸೀಳಿ ಬರುವುದರಿಂದ ಇದು ಭಾಷಾರ್ಥದೊಂದಿಗೆ ಹೋಲಿಕೆಯಾಗುತ್ತದೆ. ಮಾತ್ರವಲ್ಲ ಕತ್ತಲು ಹೋಗಿ ಬೆಳಕು ಬರುವುದು ಸಂಕಷ್ಟ ತೊಲಗಿ ಕ್ಷೇಮ ಬರುವುದಕ್ಕೆ ಸೂಚನೆಯಾಗಿರುವುದರಿಂದ ಈ ಅರ್ಥವು ಇಲ್ಲಿ ಹೆಚ್ಚು ಸೂಕ್ತವಾಗಿದೆ.