Kannada Translation

Ayah by Ayah

Tags

Download Links

Kannada Translation translation for Surah An-Nas — Ayah 6

114:6
مِنَ ٱلۡجِنَّةِ وَٱلنَّاسِ ٦
ಜಿನ್ನ್ ಮತ್ತು ಮನುಷ್ಯರ ಪೈಕಿ1
Footnotes
  • [1] ಈ ಸೂಕ್ತದಲ್ಲಿ ಮನುಷ್ಯ ಹಾಗೂ ಜಿನ್ನ್ ವರ್ಗಗಳ ಶೈತಾನರ ಕೇಡುಗಳಿಂದ ಅಭಯ ಬೇಡಲಾಗಿದೆ. ಖುರ್‍ಆನಿನ ಇನ್ನೊಂದೆಡೆ ಹೇಳಿದಂತೆ ‘ಮಾನವ ಶೈತಾನ ಹಾಗೂ ಜಿನ್ನ್ ಶೈತಾನರು ಇಸ್ಲಾಮಿಗೆ ವಿರುದ್ಧವಾಗಿ ವರ್ತಿಸುವಂತೆ ಪ್ರೇರೇಪಿಸುವ ಮನಮೋಹಕ ಮಾತುಗಳನ್ನು ವಂಚನೆಯ ರೂಪದಲ್ಲಿ ಮನಸ್ಸಿನೊಳಗೆ ಬಿತ್ತುತ್ತಾರೆ. (6:112) ಒಂದರ್ಥದಲ್ಲಿ ಮಾನವ ಶೈತಾನರು ಜಿನ್ನ್ ಶೈತಾನರಿಗಿಂತ ಉಗ್ರರೂ ಭಯಂಕರರೂ ಆಗಿದ್ದಾರೆ. ಏಕೆಂದರೆ, ಜಿನ್ನ್ ಶೈತಾನನಾಗಿದ್ದರೆ, ಅಭಯ ಬೇಡಿದಾಗ ದೂರ ಸರಿಯುತ್ತಾನೆ. ಮಾನವ ಶೈತಾನನಾಗಿದ್ದರೆ ಸಮುದಾಯದಲ್ಲಿ ಬೆರೆತು ಮಿತ್ರನ ವೇಷ ತೊಟ್ಟು ಪಾಪವನ್ನು ಚಂದಗಾಣಿಸಿ ಕೊಡುತ್ತಾನೆ. ಕೆಡುಕುಗಳ ಮೂಲಕ ಮೋಸದ ಬಲೆಯಲ್ಲಿ ಕೆಡಹುತ್ತಾನೆ.