Kannada Translation

Ayah by Ayah

Tags

Download Links

Kannada Translation translation for Surah Al-Ahzab — Ayah 22

33:22
وَلَمَّا رَءَا ٱلۡمُؤۡمِنُونَ ٱلۡأَحۡزَابَ قَالُواْ هَٰذَا مَا وَعَدَنَا ٱللَّهُ وَرَسُولُهُۥ وَصَدَقَ ٱللَّهُ وَرَسُولُهُۥۚ وَمَا زَادَهُمۡ إِلَّآ إِيمَٰنٗا وَتَسۡلِيمٗا ٢٢
ಸತ್ಯವಿಶ್ವಾಸಿಗಳು ಸಂಘ ಸೇನೆಗಳನ್ನು ಕಂಡಾಗ ``ಇದುವೇ ಅಲ್ಲಾಹು ಮತ್ತು ಪೈಗಂಬರರು ನಮಗೆ ವಾಗ್ದಾನ ಮಾಡಿದ್ದುದು. ಅಲ್ಲಾಹು ಮತ್ತು ಅವನ ಸಂದೇಶವಾಹಕರ ಮಾತು ನಿಜವಾಗಿತ್ತು” ಎಂದು ಹೇಳಿದರು. ಈ ವಾಗ್ದಾನವು ಅವರ ಸತ್ಯವಿಶ್ವಾಸವನ್ನೂ ಅವರ ಸಮರ್ಪಣೆಯನ್ನೂ ಇನ್ನಷ್ಟು ಹೆಚ್ಚಿಸಿತು1.
Footnotes
  • [1] ಯುದ್ದದ ಸಿದ್ಧತೆಗಾಗಿ ಮುಸ್ಲಿಮರು ಕಂದಕ ತೋಡುತ್ತಿರುವಾಗ ಕಠಿಣವಾದ ಒಂದು ಬೃಹತ್ ಬಂಡೆಗಲ್ಲು ಅಡ್ಡಿಯಾಯಿತು. ಪ್ರವಾದಿವರ್ಯ ರು ಅದಕ್ಕೆ ಸುತ್ತಿಗೆಯಿಂದ ಮೂರು ಬಾರಿ ಬಡಿದರು. ಅದು ಧೂಳೀಪಟವಾಗುತ್ತಿರುವ ಸಂದರ್ಭದಲ್ಲಿ ಕಿಸ್ರಾ ದೇಶದ ನಗರಗಳೂ ರೋಮನ್ನರ ಕೋಟೆ ಕೊತ್ತಲಗಳೂ ಗೋಚರವಾದುವು. ಆಗ ಪ್ರವಾದಿಯವರು; ಭೇಷ್! ಜಯ ನಿಶ್ಚಿತ ಎಂದರು. ಯುದ್ಧ ಆರಂಭವಾಯಿತು. ಶತ್ರುಗಳ ದಂಡನ್ನು ಕಂಡಾಗ ಮುಸ್ಲಿಮರು ಹೇಳಿದರು; ಇದುವೇ ಅಲ್ಲಾಹು ಮತ್ತು ಅವನ ರಸೂಲರು ವಾಗ್ದಾನವಿತ್ತ ಸತ್ವಪರೀಕ್ಷೆ ಹಾಗೂ ವಿಜಯದ ಮಾರ್ಗ!. (ಹಾಶಿಯ ಸ್ಸಾವೀ 3/270)