Kannada Translation

Ayah by Ayah

Tags

Download Links

Kannada Translation translation for Surah Al-Ahzab — Ayah 40

33:40
مَّا كَانَ مُحَمَّدٌ أَبَآ أَحَدٖ مِّن رِّجَالِكُمۡ وَلَٰكِن رَّسُولَ ٱللَّهِ وَخَاتَمَ ٱلنَّبِيِّـۧنَۗ وَكَانَ ٱللَّهُ بِكُلِّ شَيۡءٍ عَلِيمٗا ٤٠
ಮುಹಮ್ಮದರು ನಿಮ್ಮ ಪುರುಷರ ಪೈಕಿ ಯಾರದೇ ತಂದೆಯಲ್ಲ. ಆದರೆ ಅವರು ಅಲ್ಲಾಹನ ಸಂದೇಶವಾ ಹಕರು ಮತ್ತು ಪ್ರವಾದಿಗಳಲ್ಲಿ ಕೊನೆಯವರು1. ಅಲ್ಲಾಹು ಸಕಲ ವಸ್ತುಗಳ ಪರಿಜ್ಞಾನವುಳ್ಳವನು.
Footnotes
  • [1] ತಂದೆಯಲ್ಲ ಎಂದರೆ ರಕ್ತ ಸಂಬಂಧದ ತಂದೆಯಲ್ಲ ಎಂದು ವಿವಕ್ಷೆ. ಗೌರವಾದರದ ವಿಷಯದಲ್ಲಿ ತಂದೆ ಎನ್ನುವುದಕ್ಕೆ ಅಡ್ಡಿಯಿಲ್ಲ. ಅಬೂದರ್ರ್ ಉಲ್ಲೇಖಿಸಿದ ಹದೀಸ್‍ನಲ್ಲಿ “ನಾನು ನಿಮ್ಮ ತಂದೆಯ ಸ್ಥಾನದಲ್ಲಿದ್ದೇನೆ” ಎಂಬ ನಬಿಯವರ ಮಾತು ಈ ಅರ್ಥದಲ್ಲಿ ಬಂದಿದೆ. ಅಂದ ಮೇಲೆ ನಬಿವರ್ಯ ( )ರು ವಿಶ್ವಾಸಿಗಳ ಪಿತರು ಎನ್ನುವುದಕ್ಕೆ ವಿರೋದವಿಲ್ಲ. ಮಾತ್ರವಲ್ಲ ನಬಿಯವರೂ ಸೇರಿದಂತೆ ಸಕಲ ದೇವದೂತರು ಅವರ ಸಮುದಾಯದ ಹಿತಾಕಾಂಕ್ಷಿಗಳೂ ವತ್ಸಲರೂ ಆಗಿರುವರೆಂಬ ನೆಲೆಯಲ್ಲಿ ಸಮುದಾಯ ಅವರಿಗೆ ಸ್ನೇಹಾದರ ಹಾಗೂ ಅನುಸರಣೆಯನ್ನು ಮರಳಿ ಕೊಡಬೇಕೆಂಬ ನೆಲೆಯಲ್ಲಿ ಸಮುದಾಯದ ಪಿತೃ ಸಮಾನರಾಗಿದ್ದಾರೆ. (ಬೈಳಾವಿ 354, ಕುರ್ತುಬಿ 14/125) ಮುಹಮ್ಮದ ರು ಅಂತ್ಯ ಪ್ರವಾದಿ ಎಂಬ ಮಾತಿನಿಂದ ಅವರ ನಂತರ ನಬಿ ಅಥವಾ ರಸೂಲ್ ಇಲ್ಲವೆನ್ನುವುದು ಸ್ಪಷ್ಟ. ‘ಖಾತಿಮ್’ ಎಂಬುದರ ‘ತಾ’ ಅಕ್ಷರಕ್ಕೆ ಅಕಾರ (ಫತ್ಹ್)ವನ್ನೂ ಇಕಾರವನ್ನು (ಕಸ್ರ್) ಕೊಡುವ ಎರಡು ಓದುಗಳಿವೆ. ಎರಡರದ್ದೂ ‘ಕೊನೆಯವರು’ ಎಂದೇ ಅರ್ಥ. ಇದರ ಕ್ರಿಯಾ ಪದವಾದ ‘ಖತಮ’ ಎಂಬುದಕ್ಕೆ ‘ಕೊನೆಗೊಳಿಸಿದನು’ ಎಂಬಂತೆ ‘ಮುದ್ರೆಯೊತ್ತಿದನು’ ಎಂದೂ ಅರ್ಥವಿದೆ. ಅದರ ಪ್ರಕಾರ ಖಾತಮ್ ಎಂಬುದಕ್ಕೆ ಮುದ್ರೆ ಎಂಬ ಅರ್ಥ ಬರುತ್ತದೆ. ಈ ಅರ್ಥ ಪ್ರಕಾರ ‘ಖಾತಮುನ್ನಬಿಯ್ಯೀನ್’ ಎಂಬುದಕ್ಕೆ ‘ನಬಿಗಳ ಮುದ್ರೆ’ ಎಂದು ಅರ್ಥೈಸ ಬಹುದಾದರೂ ಅದರ ಉದ್ದೇಶಾರ್ಥ ನಬಿಗಳಲ್ಲಿ ಕೊನೆಯವರು ಎಂದೇ ಆಗಿರುತ್ತದೆ. ಒಂದು ವಸ್ತುವಿಗೆ ಮುದ್ರೆಯೊತ್ತಲಾಯಿತು ಅಂದರೆ ಇನ್ನು ಅದರಿಂದ ಕಳೆಯಲೂ ಸೇರಿಸಲೂ ಇಲ್ಲವೆಂದು ಅರ್ಥ ತಾನೆ? ಪ್ರವಾದಿವರ್ಯ ರು ಕೊನೆಯ ಪ್ರವಾದಿ ಎಂಬುದಕ್ಕೆ ಅನಿಷೇಧ್ಯವಾದ ಧಾರಾಳ ಹದೀಸ್‍ಗಳು ಸಹಾಬಿಗಳ ಬೃಹತ್ ಸಂಘದಿಂದ ವರದಿಯಾಗಿದೆ. (ಇಬ್ನು ಕಸೀರ್ 3/493) ನಬಿಯವರು ಅಂತ್ಯ ಪ್ರವಾದಿ ಎಂಬ ತತ್ವಕ್ಕೆ ಕೊನೆಯ ಕಾಲದಲ್ಲಿ ಈಸಾ ನಬಿಯವರ ಆಗಮನವು ವಿರೋಧವಾಗುವುದಿಲ್ಲ. ಕಾರಣ ಅವರು ಪ್ರವಾದಿವರ್ಯರಿಗಿಂತ ಮೊದಲು ಪ್ರವಾದಿತ್ವ ದೊರೆತವರು. ಅವರು ಪ್ರವಾದಿವರ್ಯ ರ ಶರೀಅತ್ ಅನುಸರಿ ಸುವ, ಅವರ ಖಿಬ್ಲಾಕ್ಕೆ ಮುಖ ಮಾಡಿ ನಮಾಝ್ ಮಾಡುವ, ನಬಿಯವರ ಉಮ್ಮತ್‍ಗಳಲ್ಲಿ ಒಬ್ಬರಾದ ನೆಲೆಯಲ್ಲಿ ಬರುತ್ತಾರೆ. (ಗರಾಇಬುಲ್ ಖುರ್‍ಆನ್)