Kannada Translation

Ayah by Ayah

Tags

Download Links

Kannada Translation translation for Surah Al-Ahzab — Ayah 58

33:58
وَٱلَّذِينَ يُؤۡذُونَ ٱلۡمُؤۡمِنِينَ وَٱلۡمُؤۡمِنَٰتِ بِغَيۡرِ مَا ٱكۡتَسَبُواْ فَقَدِ ٱحۡتَمَلُواْ بُهۡتَٰنٗا وَإِثۡمٗا مُّبِينٗا ٥٨
ಸತ್ಯವಿಶ್ವಾಸಿಗಳಿಗೂ ಸತ್ಯವಿಶ್ವಾಸಿನಿಯರಿಗೂ ಅವರು ಮಾಡದ ಕರ್ಮಕ್ಕಾಗಿ ತೊಂದರೆ ಕೊಡುವವರು ಗಂಭೀರ ಸುಳ್ಳಾರೋಪ ಹಾಗೂ ಸುವ್ಯಕ್ತ ಪಾಪದ ಹೊರೆಯನ್ನು ಹೊತ್ತುಕೊಂಡರು1.
Footnotes
  • [1] ಈ ಆಯತ್‍ನಲ್ಲಿ ಮುಸ್ಲಿಮರಿಗೆ ಕಿರುಕುಳ ನೀಡುವವರ ಬಗ್ಗೆ ಪ್ರತಿಪಾದಿಸಲಾಗಿದೆ. ಎರಡನೇ ಜಾಗದಲ್ಲಿ ಬಿಗೈರಿ ಮಕ್ತಸಬೂ (ಅವರು ಮಾಡದೆ ಇರುವ ಕಾರಣಕ್ಕೆ) ಎಂಬ ಒಂದು ಉಪಾಧಿ ಇದೆ. ಕಾರಣ ವ್ಯಕ್ತ. ಅಲ್ಲಾಹು ಮತ್ತು ರಸೂಲರಿಗೆ ಕೇಡು ಬಗೆಯುವುದು ಯಾವ ಕಾರಣಕ್ಕೂ ಸಮರ್ಥನೀಯವಲ್ಲ. ಮುಸ್ಲಿಮರ ಕಾರ್ಯದಲ್ಲಿ ಕೆಲವೊಮ್ಮೆ ನ್ಯಾಯವಾದ ಕಾರಣ ಇರಬಹುದು. (ಖುರ್ತುಬಿ 14/238)