Kannada Translation

Ayah by Ayah

Tags

Download Links

Kannada Translation translation for Surah Saba — Ayah 10

34:10
۞ وَلَقَدۡ ءَاتَيۡنَا دَاوُۥدَ مِنَّا فَضۡلٗاۖ يَٰجِبَالُ أَوِّبِي مَعَهُۥ وَٱلطَّيۡرَۖ وَأَلَنَّا لَهُ ٱلۡحَدِيدَ ١٠
ನಾವು ದಾವೂದರಿಗೆ ನಮ್ಮಿಂದ ಔದಾರ್ಯವನ್ನು ಕೊಟ್ಟಿದ್ದೇವೆ. ಪರ್ವತಗಳೇ, ಪಕ್ಷಿಗಳೇ, ದಾವೂದರೊಡನೆ ನೀವು ಕೀರ್ತನೆಯನ್ನು ಪುನರಾವರ್ತಿಸಿರಿ (ಎಂದು ನಾವು ಅಪ್ಪಣೆ ಕೊಟ್ಟೆವು). ಅವರಿಗೆ ನಾವು ಕಬ್ಬಿಣವನ್ನು ಮೃದುಗೊಳಿಸಿದೆವು1.
Footnotes
  • [1] ಅವರು ಕಬ್ಬಿಣವನ್ನು ಕೈಗೆತ್ತಿಕೊಂಡರೆ ಅದು ಹದ ಮಾಡಿದ ಹಿಟ್ಟಿನಂತಾಗುವುದು. ಅದರಿಂದ ತಾನಿಚ್ಚಿಸಿದ್ದನ್ನು ನಿರ್ಮಿಸಲು ಅವರಿಗೆ ಸಾಧ್ಯವಾಗುತ್ತಿತ್ತು. ಸ್ವಲ್ಪ ಸಮಯದಲ್ಲೇ ಸಾವಿರ ದಿರ್ಹಮ್ ಬೆಲೆ ಬಾಳುವ ಎದೆ ಕವಚವನ್ನು ನಿರ್ಮಿಸುವರು. ಅದನ್ನು ಮಾರಿ ಬಂದ ಹಣದಿಂದ ಜೀವಿಸುತ್ತಿದ್ದರು. ಉಳಿದು ದನ್ನು ದಾನ ಮಾಡುವರು. (ಖುರ್ತುಬಿ 14/266) ಹಸನುಲ್ ಬಸ್ವರಿ, ಖತಾದ, ಅಹ್ಮಶ್ ಮುಂತಾದವರು ಹೇಳುತ್ತಾರೆ. ‘ಕಬ್ಬಿಣವನ್ನು ಬೆಂಕಿಯಲ್ಲಿ ಕಾಯಿ ಸುವ ಮತ್ತು ಸುತ್ತಿಗೆಯಿಂದ ಬಡಿಯುವ ಅಗತ್ಯ ಅವರಿಗೆ ಇರಲಿಲ್ಲ. ನೂಲನ್ನು ಹೊಸೆಯುವಂತೆ ಅವರು ಕಬ್ಬಿಣವನ್ನು ಹೊಸೆಯುತ್ತಿದ್ದರು’. (ಇಬ್ನು ಕಸೀರ್)