Kannada Translation

Ayah by Ayah

Tags

Download Links

Kannada Translation translation for Surah Saba — Ayah 14

34:14
فَلَمَّا قَضَيۡنَا عَلَيۡهِ ٱلۡمَوۡتَ مَا دَلَّهُمۡ عَلَىٰ مَوۡتِهِۦٓ إِلَّا دَآبَّةُ ٱلۡأَرۡضِ تَأۡكُلُ مِنسَأَتَهُۥۖ فَلَمَّا خَرَّ تَبَيَّنَتِ ٱلۡجِنُّ أَن لَّوۡ كَانُواْ يَعۡلَمُونَ ٱلۡغَيۡبَ مَا لَبِثُواْ فِي ٱلۡعَذَابِ ٱلۡمُهِينِ ١٤
ಅನಂತರ ನಾವು ಸುಲೈಮಾನರಿಗೆ ಮರಣವನ್ನು ವಿಧಿಸಿದಾಗ ಜಿನ್ನ್‍ಗಳಿಗೆ ಅವರ ಮರಣದ ಬಗ್ಗೆ ತಿಳಿಸಿದ್ದು ಅವರ ಊರುಗೋಲನ್ನು ತಿನ್ನುತ್ತಿದ್ದ ಗೆದ್ದಲಿನ ಹೊರತು ಬೇರೇನೂ ಅಲ್ಲ. ಹೀಗೆ ಸುಲೈ ಮಾನರು (ಮರಣದ ನಂತರ) ನೆಲಕ್ಕೆ ಬಿದ್ದಾಗ, ತಮಗೆ ಪರೋಕ್ಷ ಜ್ಞಾನವಿರುತ್ತಿದ್ದರೆ ತಾವು ಇಂತಹ ಅಪಮಾನಕರ ಶಿಕ್ಷೆಯಲ್ಲಿ ಬೀಳುತ್ತಿರಲಿಲ್ಲ ವೆಂದು ಜಿನ್ನ್‍ಗಳಿಗೆ ಸ್ಪಷ್ಟವಾಗಿ ತಿಳಿಯಿತು1.
Footnotes
  • [1] ಸುಲೈಮಾನ್ ನಬಿ ಯವರು ತನ್ನ ರೂಢಿಯಂತೆ ಬೆತ್ತದಲ್ಲಿ ಊರಿ ನಿಂತುಕೊಂಡು ಆರಾಧನಾ ನಿರತರಾಗಿದ್ದಾಗಲೇ ಮರಣ ಹೊಂದಿದರು. ಮರಣದ ನಂತರವೂ ಅದೇ ಸ್ಥಿತಿಯಲ್ಲಿ ಬೆತ್ತವನ್ನು ಊರಿ ನಿಂತಿದ್ದರು. ನೆಲಕ್ಕುರುಳಲಿಲ್ಲ. ಆದ್ದರಿಂದ ಮರಣ ವಾರ್ತೆ ಯಾರಿಗೂ ಗೊತ್ತಾಗಲಿಲ್ಲ. ಹಾಗೇ ಕೆಲವು ಕಾಲ ಕಳೆದ ನಂತರ ಊರಿದ್ದ ಬೆತ್ತದ ತುದಿಯನ್ನು ಗೆದ್ದಲು ತಿಂದಾಗ ಆಯ ತಪ್ಪಿ ಪಾರ್ಥಿವ ದೇಹವು ನೆಲಕ್ಕುರುಳಿತು. ಆಗಲೇ ಮರಣ ವಾರ್ತೆ ತಿಳಿದದ್ದು. ಜಿನ್ನ್‍ಗಳು ತಮಗೆ ಅದೃಶ್ಯ ಕಾರ್ಯಗಳು ಗೊತ್ತು ಎಂದು ವಾದಿಸಿದ್ದರು. ಆ ವಾದ ತಪ್ಪಾಗಿತ್ತೆಂದೂ ಅದೃಶ್ಯ ಗೊತ್ತಾಗುವುದಿದ್ದರೆ ಮರಣದ ತಕ್ಷಣ ನಮಗೆ ತಿಳಿಯಬೇಕಿತ್ತೆಂದೂ, ಆಗ ಈ ಕಷ್ಟದಾಯಕ ಕೆಲಸಗಳಿಂದ ತಮಗೆ ತಕ್ಷಣವೇ ಮುಕ್ತಿ ಸಿಗುತ್ತಿತ್ತೆಂದೂ ಜಿನ್ನ್‍ಗಳಿಗೆ ಜ್ಞಾನೋದಯವಾಯಿತು. ಅವರು ಆಜ್ಞೆಗೆ ಬದ್ಧರಾಗಿ ನಿರ್ವಾಹವಿಲ್ಲದೆ ಮಾತ್ರ ಕೆಲಸ ಮಾಡುವವರಾಗಿದ್ದರು. (ಇಬ್ನು ಕಸೀರ್ 3/529)