Kannada Translation

Ayah by Ayah

Tags

Download Links

Kannada Translation translation for Surah Saba — Ayah 16

34:16
فَأَعۡرَضُواْ فَأَرۡسَلۡنَا عَلَيۡهِمۡ سَيۡلَ ٱلۡعَرِمِ وَبَدَّلۡنَٰهُم بِجَنَّتَيۡهِمۡ جَنَّتَيۡنِ ذَوَاتَيۡ أُكُلٍ خَمۡطٖ وَأَثۡلٖ وَشَيۡءٖ مِّن سِدۡرٖ قَلِيلٖ ١٦
ಆಮೇಲೆ ಅವರು ವಿಮುಖರಾದರು. ತನ್ನಿಮಿತ್ತ ನಾವು ಅವರ ಮೇಲೆ ಅಣೆಕಟ್ಟು ಮುರಿದ ಜಲ ಪ್ರವಾಹವನ್ನು ಕಳುಹಿಸಿದೆವು1. ಅವರ ಹಿಂದಿನ ಎರಡು ತೋಟಗಳ ಸ್ಥಾನದಲ್ಲಿ ಕಹಿ ಫಲಗಳು, ಮುಳ್ಳು ಗಿಡಗಂಟಿಗಳು ಮತ್ತು ಕೆಲವು ಬೋರೆ ಮರಗಳಿಂದ ಕೂಡಿದ ಬೇರೆ ಎರಡು ತೋಟಗ ಳನ್ನು ಅವರಿಗೆ ಬದಲಿ ಕೊಟ್ಟೆವು.
Footnotes
  • [1] ಈ ಅನುಗ್ರಹಗಳನ್ನೆಲ್ಲ ನೀಡಿದ ಅಲ್ಲಾಹುವಿಗೆ ಅವರು ದ್ರೋಹ ಬಗೆದರು. ಅವನ ಪ್ರವಾದಿಗಳ ಬೋಧನೆಗಳನ್ನು ತಳ್ಳಿ ಹಾಕಿದರು. ಇವರತ್ತ ಒಟ್ಟು ಹದಿಮೂರು ಪ್ರವಾದಿಗಳು ಬಂದು ಬೋಧನೆ ನೀಡಿರುವುದಾಗಿ ಇಬ್ನು ಕಸೀರ್ ಉದ್ಧರಿಸಿದ್ದಾರೆ. (ತಫ್ಸೀರ್ 3/532) ಪ್ರವಾದಿಗಳನ್ನು ಅವರು ಕಡೆಗಣಿಸಿದಾಗ ಅವರ ಅಣೆಕಟ್ಟು ಒಡೆದು ಜಲಸಂಗ್ರಹವು ಹರಿದು ಹೋಯಿತು. ಅವರ ತೋಟಗಳೂ, ಮನೆಗಳೂ ಮುಳುಗಿ ನಾಶವಾದವು. ಇಡೀ ಊರೇ ಜಲಾವೃತವಾಯಿತು. (ತಫ್ಸೀರ್ ತ್ವಬರಿ)