Kannada Translation

Ayah by Ayah

Tags

Download Links

Kannada Translation translation for Surah Saba — Ayah 32

34:32
قَالَ ٱلَّذِينَ ٱسۡتَكۡبَرُواْ لِلَّذِينَ ٱسۡتُضۡعِفُوٓاْ أَنَحۡنُ صَدَدۡنَٰكُمۡ عَنِ ٱلۡهُدَىٰ بَعۡدَ إِذۡ جَآءَكُمۖ بَلۡ كُنتُم مُّجۡرِمِينَ ٣٢
ಗಣ್ಯರೆನಿಸಿಕೊಂಡವರು ದುರ್ಬಲರೊಡನೆ, “ನಿಮ್ಮ ಬಳಿಗೆ ಸನ್ಮಾರ್ಗ ಬಂದ ನಂತರ ಅದರಿಂದ ನಿಮ್ಮನ್ನು ನಾವು ತಡೆದಿದ್ದೇವೆಯೇ? ಇಲ್ಲ, ಪರಂತು ಸ್ವತಃ ನೀವೇ ಅಪರಾಧಿಗಳಾಗಿದ್ದಿರಿ” ಎಂದು ಉತ್ತರಿಸುವರು1.
Footnotes
  • [1] ‘ನಾವು ನಿಮಗೆ ಏನೂ ಮಾಡಿಲ್ಲ. ದುರ್ಮಾರ್ಗಕ್ಕೆ ನಿಮ್ಮನ್ನು ನಾವು ಕರೆದದ್ದು ನಿಜ. ಆದರೆ ಅದಕ್ಕೆ ಯಾವುದೇ ಪ್ರಮಾಣಗಳು ಇಲ್ಲದಾಗ್ಯೂ ನೀವು ಅನುಸರಿಸಿದ್ದು ನಿಮ್ಮ ತಪ್ಪಲ್ಲವೇ? ಪ್ರವಾದಿಗಳ ತತ್ವಗಳಿಗೆ ಪುರಾವೆಗಳಿದ್ದಾಗ್ಯೂ ನೀವದನ್ನು ಕಡೆಗಣಿಸಿಲ್ಲವೆ? ಅದೆಲ್ಲ ನಿಮ್ಮ ಇಚ್ಛೆ ಪ್ರಕಾರವಾಗಿತ್ತು. ಆದ್ದರಿಂದ ನಿಮ್ಮ ತಪ್ಪಿಗೆ ನೀವೇ ಹೊಣೆ, ನಾವಲ್ಲ’’, ಎಂದು ಮುಖಂಡರು ಹೇಳುವರು. (ತಫ್ಸೀರುಲ್ ಖುರ್‍ಆನ್ 3/539)