Kannada Translation

Ayah by Ayah

Tags

Download Links

Kannada Translation translation for Surah Fatir — Ayah 1

35:1
ٱلۡحَمۡدُ لِلَّهِ فَاطِرِ ٱلسَّمَٰوَٰتِ وَٱلۡأَرۡضِ جَاعِلِ ٱلۡمَلَٰٓئِكَةِ رُسُلًا أُوْلِيٓ أَجۡنِحَةٖ مَّثۡنَىٰ وَثُلَٰثَ وَرُبَٰعَۚ يَزِيدُ فِي ٱلۡخَلۡقِ مَا يَشَآءُۚ إِنَّ ٱللَّهَ عَلَىٰ كُلِّ شَيۡءٖ قَدِيرٞ ١
ಸರ್ವಸ್ತುತಿಯು ಅಲ್ಲಾಹನಿಗೆ ಮೀಸಲು. ಅವನು ಆಕಾಶಗಳ ಮತ್ತು ಭೂಮಿಯ ಸೃಷ್ಟಿಕರ್ತನು. ಎರಡೆರಡು, ಮೂರು ಮೂರು ಹಾಗೂ ನಾಲ್ಕು ನಾಲ್ಕು ರೆಕ್ಕೆಗಳಿರುವ ದೇವಚರರನ್ನು ದೂತರನ್ನಾಗಿ ನೇಮಿಸಿದವನು. ಅವನು ತನ್ನ ಸೃಷ್ಟಿಯಲ್ಲಿ ತಾನಿಚ್ಚಿಸಿದ್ದನ್ನು ಹೆಚ್ಚಿಸುತ್ತಾನೆ1. ಅಲ್ಲಾಹನು ಎಲ್ಲ ವಸ್ತುವಿನ ಮೇಲೆ ಸಾಮಥ್ರ್ಯವುಳ್ಳವನು.
Footnotes
  • [1] *ಫಾತ್ವಿರ್ ಪದವು `ಫತ್ವರ’ ಎಂಬ ಕ್ರಿಯಾಪದದ ಕರ್ತೃವಾಚಿ. ಸೂರಾದ ಒಂದನೇ ವಾಕ್ಯದಲ್ಲಿರುವ ಈ ಪದವನ್ನೇ ಸೂರಾದ ನಾಮವನ್ನಾಗಿ ಆಯ್ಕೆ ಮಾಡಲಾಗಿದೆ. ಅದೇ ಸೂಕ್ತದಲ್ಲಿ ಮಲಕ್‍ಗಳ ಸೃಷ್ಟಿಯ ಬಗ್ಗೆ ಪ್ರತಿಪಾದನೆಯಿರುವುದರಿಂದ `ಸೂರತುಲ್ ಮಲಾಇಕಾ’ ಎಂಬ ಹೆಸರೂ ಇದೆ. *ಅರ್ಥಾತ್ ಅಲ್ಲಾಹನು ತನ್ನ ಆದೇಶಗಳನ್ನು ತಲುಪಿಸಿ ಕೊಡಲಿಕ್ಕಾಗಿ ಮಲಾಯಿಕತÀನ್ನು ಅಲ್ಲಾಹ್ ಹಾಗೂ ಅವನ ಪ್ರವಾದಿಗಳ ನಡುವೆ ಮಧ್ಯವರ್ತಿಗಳನ್ನಾಗಿ ಮಾಡಿರುವನು. ಇಬ್ನುಲ್ ಜವ್‍ಝಿಯವರ ಪ್ರಕಾರ ಅಲ್ಲಾಹನು ಪ್ರವಾದಿಗಳ ಬಳಿ ಮಾತ್ರವಲ್ಲ, ಬೇರೆ ಕಾರ್ಯಗಳಿಗೂ ಮಲಕ್‍ಗಳನ್ನು ದೂತರನ್ನಾಗಿ ಕಳುಹಿಸುವನು. (ರhೂದುಲ್ ಮಸೀರ್ 6/473) ಮಲಾಇಕತ್‍ಗಳ ಸೃಷ್ಟಿಯ ಪ್ರತಿಪಾದನೆಯಲ್ಲಿ ಇದನ್ನು ಹೇಳಿರುವುದರಿಂದ ತಾನುದ್ದೇಶವಿಟ್ಟಂತೆ ಇನ್ನೂ ಮಲಕ್‍ಗಳ ಸೃಷ್ಟಿ ಮಾಡುತ್ತಲೇ ಇರುತ್ತಾನೆ ಎಂದು ಮಲಕ್‍ಗಳಿಗೆ ಮಾತ್ರ ಸೀಮಿತಗೊಳಿಸಿದ ವ್ಯಾಖ್ಯಾನವಿದೆ. ಅಂದರೆ ಗಾತ್ರ, ರೂಪ, ರೆಕ್ಕೆಗಳ ಸಂಖ್ಯೆಯಲ್ಲಿ ವೈವಿಧ್ಯತೆಯುಳ್ಳ ಮಲಕ್‍ಗಳ ಸೃಷ್ಟಿ ಕಾರ್ಯ ನಡೆಯುತ್ತಿರುತ್ತದೆ ಎಂದರ್ಥ. ಮಲಕ್‍ಗಳಿಗೆ ಮಾತ್ರ ಸೀಮಿತವಾಗಿರದೆ ಎಲ್ಲ ಸೃಷ್ಟಿಗಳಿಗೂ ವ್ಯಾಪಕಗೊಳಿಸಿದ ವ್ಯಾಖ್ಯಾನವೂ ಇದೆ. ದೇಹದಲ್ಲಿ ಉದ್ದ, ಕುಳ್ಳು, ಬುದ್ಧಿ ವೈಭವ, ವಾಕ್ಚಾತುರ್ಯ, ಮಧುರ ಕಂಠ ಮುಂತಾದ ಅಪರಿಮಿತ ವೈವಿಧ್ಯತೆಗಳು ಮನುಷ್ಯರಲ್ಲೂ ಕಂಡುಬರುತ್ತಲೇ ಇರುತ್ತವೆ. ಇತರ ಜೀವಿಗಳು, ಪ್ರಾಣಿಗಳು ಹಾಗೂ ಪ್ರಕೃತಿಯಲ್ಲೂ ವೈವಿಧ್ಯತೆ ಹಾಗೂ ಆಶ್ಚರ್ಯಕರ ವಿಧಾನಗಳಿಗೂ ಈ ಆಯತ್ ಬೊಟ್ಟು ಮಾಡುತ್ತಿದೆ.