Kannada Translation

Ayah by Ayah

Tags

Download Links

Kannada Translation translation for Surah Fatir — Ayah 18

35:18
وَلَا تَزِرُ وَازِرَةٞ وِزۡرَ أُخۡرَىٰۚ وَإِن تَدۡعُ مُثۡقَلَةٌ إِلَىٰ حِمۡلِهَا لَا يُحۡمَلۡ مِنۡهُ شَيۡءٞ وَلَوۡ كَانَ ذَا قُرۡبَىٰٓۗ إِنَّمَا تُنذِرُ ٱلَّذِينَ يَخۡشَوۡنَ رَبَّهُم بِٱلۡغَيۡبِ وَأَقَامُواْ ٱلصَّلَوٰةَۚ وَمَن تَزَكَّىٰ فَإِنَّمَا يَتَزَكَّىٰ لِنَفۡسِهِۦۚ وَإِلَى ٱللَّهِ ٱلۡمَصِيرُ ١٨
ತಪ್ಪಿನ ಹೊರೆ ಹೊರುವ ಯಾವನೂ ಇನ್ನೊಬ್ಬನ ಹೊರೆಯನ್ನು ಹೊರಲಾರನು. (ಅಪರಾಧದಿಂದ) ಹೊರೆ ಹೊತ್ತ ವ್ಯಕ್ತಿಯು ತನ್ನ ಹೊರೆಯನ್ನು ಹೊರಲು ಇನ್ನೊಬ್ಬನನ್ನು ಕೂಗಿದರೆ, ಅವನ ಆಪ್ತ ಬಂಧುವೇ ಆಗಿದ್ದರೂ ಅವನ ಹೊರೆಯಿಂದ ಒಂದಿಷ್ಟನ್ನೂ ಹೊರಲಾರನು1. ಪರೋಕ್ಷವಾಗಿ ತಮ್ಮ ಪ್ರಭುವನ್ನು ಭಯಪಡುವವರಿಗೆ ಮತ್ತು ನಮಾಝ್ ಸಂಸ್ಥಾಪಿಸುವವರಿಗೆ ಮಾತ್ರ ನೀವು ಎಚ್ಚರಿಕೆ ಕೊಡಬಲ್ಲಿರಿ. ಯಾವನು ಶುದ್ಧಿಯಾಗುತ್ತಾನೆ, ಅವನು ತನಗಾಗಿಯೇ ಶುದ್ಧಿಯಾಗು ತ್ತಾನೆ. ನಿರ್ಗಮನ ಅಲ್ಲಾಹನ ಕಡೆಗೇ ಇದೆ.
Footnotes
  • [1] ಭೌತಿಕ ಜಗತ್ತಿನ ಸರ್ವಾಧಿಕಾರಿಗಳು ಮಾಡುವಂತೆ ಒಬ್ಬನ ತಪ್ಪಿಗೆ ಮತ್ತೊಬ್ಬನಿಗೋ, ನೆರೆಯವನಿಗೋ, ಕುಟುಂಬದವರಿಗೋ ಶಿಕ್ಷೆ ನೀಡುವುದಿಲ್ಲ. ಪಾಪವನ್ನು ಹೊತ್ತುಕೊಂಡವನು ತನ್ನ ಭಾರವನ್ನು ವಹಿಸಿಕೊಳ್ಳುವಂತೆ ಇನ್ನೊಬ್ಬನಿಗೆ ಕೇಳಿಕೊಂಡರೂ ಭಾರವಿಳಿಸುವ ಯಾವ ಅವಕಾಶವನ್ನೂ ಅಲ್ಲಿ ನೀಡಲಾಗುವುದಿಲ್ಲ. ಇವೆರಡರಲ್ಲಿ ಸೂಕ್ಷ್ಮ ಅಂತರವಿದೆ. ಅದೇನೆಂದರೆ, ಮೊದಲನೇ ವಾಕ್ಯವು ಅಲ್ಲಾಹುವಿನ ವಿಧಿಯಲ್ಲಿರುವ ನೀತಿ ನಿಷ್ಠೆಯನ್ನು ಸೂಚಿಸುತ್ತದೆ. ಯಾವನಿಗೂ ಮಾಡದ ತಪ್ಪಿಗೆ ಶಿಕ್ಷೆ ಕೊಡುವುದಿಲ್ಲ. ಎರಡನೇ ವಾಕ್ಯವು ಅಲ್ಲಿ ಸಹಾಯಾಭ್ಯರ್ಥಿಗೆ ಯಾವ ಸಹಾಯವೂ ದೊರೆಯುವುದಿಲ್ಲ ಎಂಬುದನ್ನು ವ್ಯಕ್ತಗೊಳಿಸುತ್ತದೆ. (ಅಲ್-ಕಶ್ಶಾಫ್ 3:479 ಬಹ್ರ್ 7/307) ಒಬ್ಬನ ಗುಣವು ಇನ್ನೊಬ್ಬನಿಗೆ ಯಾವುದೇ ಫಲ ನೀಡಲಾರದು ಎಂಬುವುದು ಈ ಸೂಕ್ತದ ಅರ್ಥವಲ್ಲ. ಹೆಚ್ಚಿನ ವಿವರಣೆಗಳಿಗಾಗಿ ನೋಡಿರಿ ಅಧ್ಯಾಯ 53ರ 38ನೇ ಸೂಕ್ತದ ಟಿಪ್ಪಣಿ.