Kannada Translation

Ayah by Ayah

Tags

Download Links

Kannada Translation translation for Surah Fatir — Ayah 22

35:22
وَمَا يَسۡتَوِي ٱلۡأَحۡيَآءُ وَلَا ٱلۡأَمۡوَٰتُۚ إِنَّ ٱللَّهَ يُسۡمِعُ مَن يَشَآءُۖ وَمَآ أَنتَ بِمُسۡمِعٖ مَّن فِي ٱلۡقُبُورِ ٢٢
ಜೀವಂತರೂ ಮೃತರೂ ಸಮಾನರಲ್ಲ1.ಅಲ್ಲಾಹು ತಾನಿಚ್ಛಿಸಿದವರಿಗೆ ಕೇಳಿಸುತ್ತಾನೆ. ಆದರೆ ಸಮಾಧಿ ಗಳಲ್ಲಿರುವವರಿಗೆ ನೀವು ಕೇಳಿಸಲಾರಿರಿ2.
Footnotes
  • [1] ಇವು ಸತ್ಯವಿಶ್ವಾಸಿ ಮತ್ತು ಸತ್ಯನಿಷೇಧಿಗಳಿಗೆ ಕೊಟ್ಟ ಉಪಮೆಗಳು. ಇಲ್ಲಿ ವಸ್ತ್ತುಗಳ ಅಸಮಾನತೆಯನ್ನು ನಿರೂಪಿಸಿರುವ ಶೈಲಿಯು ಆಕರ್ಷಕ ಹಾಗೂ ಸಾಹಿತ್ಯ ಪೂರ್ಣವಾಗಿದೆ. ಮೊದಲು ಅಂಧನನ್ನೂ ದೃಷ್ಟಿಯುಳ್ಳವನನ್ನೂ ನಿಷೇಧ ಹಾಗೂ ವಿಶ್ವಾಸಕ್ಕೆ ಉಪಮೆಯಾಗಿ ಹೇಳಲಾಯಿತು. ನಂತರ ನಿಷೇಧಿಯು ನೆಲೆಗೊಂಡಿರುವ ಕುಫ್ರಿನ ಅಂಧಕಾರ ಹಾಗೂ ವಿಶ್ವಾಸಿಯು ಹೊಂದಿರುವ ಈಮಾನಿನ ಪ್ರಭೆಯನ್ನು ಹೇಳಲಾಯಿತು. ನಂತರ ಅವರವರಿಗೆ ಪ್ರಾಪ್ತವಾಗುವ ಫಲಗಳ ವಿವರಣೆ. ಮುಸ್ಲಿಮನು ಸತ್ಯವಿಶ್ವಾಸದ ಫಲವಾಗಿ ಸಂತೃಪ್ತಿ ಹಾಗೂ ಮಹದಾನಂದದ ನೆರಳಿನಲ್ಲಿ. ನಿಷೇಧಿಯು ಘೋರ ಶಿಕ್ಷೆಯ ಕಡು ಶಾಖದಲ್ಲಿ. ನಂತರ ಬಂದಿರುವ ಸಜೀವಿ - ನಿರ್ಜೀವಿಯ ಉಪಮೆ ಹೃದಯಸ್ಪರ್ಶಿ. (ಅಲ್-ಬಹ್ರುಲ್ ಮುಹೀತ್ 7/309)
  • [2] ಇಬ್ನುಲ್ ಖಯ್ಯಿಮ್ ಬರೆಯುತ್ತಾರೆ, ಇದರ ತಾತ್ಪರ್ಯವು ಹೃದಯ ಸತ್ತ ಸತ್ಯನಿಷೇಧಿ ಎಂಬುದು ಆಯತಿನ ಸಾಂದರ್ಭಿಕತೆಯಿಂದ ವ್ಯಕ್ತ. ಸಮಾಧಿಸ್ಥನಿಗೆ ಬೋಧನೆ ನೀಡುವುದು ಹೇಗೆ ನಿಷ್ಫಲವೋ ಹಾಗೇ ಇವನಿಗೂ ಎಂದರ್ಥ. ಅಂದರೆ ಫಲಪ್ರದವಾದ ಶ್ರವಣ ಇಬ್ಬರಿಗೂ ಇಲ್ಲವೆಂದರ್ಥ. (ವಾಸ್ತವದಲ್ಲಿ ಸತ್ಯನಿಷೇಧಿಯ ಕಿವಿಗೆ ಬೋಧನೆ ಕೇಳುವುದಾದರೂ ಅದು ಫಲಪ್ರದ ಕೇಳ್ವಿಯಲ್ಲ). ಇಷ್ಟೇ ಹೊರತು ಸಮಾಧಿಸ್ಥರಿಗೆ ಯಾವ ಕೇಳ್ವಿಯೂ ಇಲ್ಲವೆಂದು ಇಲ್ಲಿ ಉದ್ದೇಶವಿಲ್ಲ. ಸಮಾಧಿ ಮಾಡಿ ಹೋಗುವವರ ಚಪ್ಪಲಿಯ ಸಪ್ಪಳವನ್ನು ಸಮಾಧಿಸ್ಥರು ಕೇಳುವರು ಎಂದು ಹದೀಸ್‍ನಲ್ಲಿದೆ. ಅಲ್ಲದೆ ಅಸ್ಸಲಾಮು ಅಲೈಕುಂ ಎಂದು ಸಮಾಧಿಸ್ಥರಿಗೆ ನೇರ ಸಂಭಾಷಣೆಯಾಗಿ ಹೇಳುವ ಕ್ರಮವನ್ನು ಇಸ್ಲಾಮ್ ರೂಢಿಸಿದೆ. ಅಲ್ಲದೆ ಅವರು ಸಲಾಮಿಗೆ ಜವಾಬು ಕೂಡಾ ಹೇಳುವರೆಂದು ಹದೀಸ್‍ನಲ್ಲಿದೆ. (ಅರ್ರೂಹ್ 57)