Kannada Translation

Ayah by Ayah

Tags

Download Links

Kannada Translation translation for Surah Fatir — Ayah 28

35:28
وَمِنَ ٱلنَّاسِ وَٱلدَّوَآبِّ وَٱلۡأَنۡعَٰمِ مُخۡتَلِفٌ أَلۡوَٰنُهُۥ كَذَٰلِكَۗ إِنَّمَا يَخۡشَى ٱللَّهَ مِنۡ عِبَادِهِ ٱلۡعُلَمَٰٓؤُاْۗ إِنَّ ٱللَّهَ عَزِيزٌ غَفُورٌ ٢٨
ಇದೇ ರೀತಿಯಲ್ಲಿ ಮನುಷ್ಯರಲ್ಲೂ, ಪ್ರಾಣಿಗಳಲ್ಲೂ ಜಾನುವಾರುಗಳಲ್ಲೂ ವಿಭಿನ್ನ ಬಣ್ಣಗಳುಂಟು1. ಅಲ್ಲಾಹನ ದಾಸರಲ್ಲಿ ಜ್ಞಾನವುಳ್ಳವರು ಮಾತ್ರ ಅವನನ್ನು ಭಯಪಡುತ್ತಾರೆ2. ನಿಶ್ಚಯವಾಗಿಯೂ ಅಲ್ಲಾಹನು ಪ್ರತಾಪಶಾಲಿಯೂ ಕ್ಷಮಾ ಶೀಲನೂ ಆಗಿರುತ್ತಾನೆ.
Footnotes
  • [1] ಬಾನಿನಿಂದ ನೀರಿಳಿಸುವ ವಿಷಯದ ನಂತರ ವಿವಿಧ ಬಣ್ಣಗಳ ಹಣ್ಣುಗಳ ಪ್ರಸ್ತಾಪ ಮಾಡಲಾಗಿದೆ. ನಂತರ ವಿವಿಧ ಬಣ್ಣಗಳ ಬೆಟ್ಟ ಗುಡ್ಡಗಳ ವರ್ಣನೆ ಬಂದಿದೆ. ಹಣ್ಣುಗಳ ಬಣ್ಣಗಳಿಗೂ ಕಲ್ಲುಗಳ ಬಣ್ಣಕ್ಕೂ ಅದ್ಭುತ ಸಾಮ್ಯತೆ ಇದೆ. ನಂತರ ಮನುಷ್ಯ ಮತ್ತು ಪ್ರಾಣಿಗಳ ವರ್ಣ ವೈವಿಧ್ಯತೆಗಳನ್ನು ಹೇಳಲಾಗಿದೆ. ಬಣ್ಣವಿಲ್ಲದ ಜಲದಿಂದ ವಿವಿಧ ವರ್ಣಗಳ ಹಣ್ಣು ಹಂಪಲುಗಳು, ಕಾಯಿ ಪಲ್ಲೆಗಳು, ಹೂವುಗಳು ಮುಂತಾದವುಗಳ ಸೃಷ್ಟಿಯ ಅದ್ಭುತವನ್ನು ಕಾಣಬಹುದು. ``ಮೇಲಿಂದ ಮಳೆ ಸುರಿಸಿ ವಿವಿಧ ಬಣ್ಣಗಳ ಹಣ್ಣುಗಳ ಸೃಷ್ಟಿ'' ಎಂಬ ಪ್ರತಿಪಾದನೆಯಲ್ಲಿ ಈ ಸೂಕ್ಷ್ಮತೆಯನ್ನು ಗಮನಿಸಬಹುದು. ತಕ್ಷಣ ಬೆಟ್ಟಗಳ ವರ್ಣ ವೈವಿಧ್ಯತೆಗಳಿಗೆ ಹೊರಳಿದ ನಂತರ ``ಅದೇ ಪ್ರಕಾರ (ಕದ್ಸಾಲಿಕ) ಮನುಷ್ಯ ಮತ್ತು ಪ್ರಾಣಿಗಳ ವರ್ಣ ವೈವಿಧ್ಯಗಳ ಪ್ರತಿಪಾದನೆ ಬಂದಿದೆ. ಅಧ್ಯಯನ ನಡೆಸುವವರಿಗೆ ಅದ್ಭುತ ಫಲಿತಾಂಶ ಪಡೆಯಬಲ್ಲ ಅಂಶಗಳು ಇಲ್ಲಿ ಧಾರಾಳ ಇವೆ.
  • [2] ಅಲ್ಲಾಹನ ಸೃಷ್ಟಿ ವೈಭವಗಳ ಬಗ್ಗೆ ಯೋಚಿಸಿ ಅವನ ಅದ್ಭುತ ಶಕ್ತಿ ಸಾಮಥ್ರ್ಯಗಳನ್ನು ಅರಿತುಕೊಳ್ಳಲು ಇಲ್ಲಿ ಆದೇಶಿಸಲಾಗಿದೆ. ಆದರೆ ಈ ಅರಿವು ಕೇವಲ ಅರಿವು ಮಾತ್ರವಾಗಿರದೆ ಆ ಅರಿವಿನಿಂದ ಅಲ್ಲಾಹನಲ್ಲಿ ಭಯ ಭಕ್ತಿ ಹೆಚ್ಚಬೇಕು ಎಂಬ ಸೂಚನೆಯನ್ನು ``ಅಲ್ಲಾಹನನ್ನು ಭಯ ಪಡುವುದು ಅರಿತವರು ಮಾತ್ರ'' ಎಂಬ ಆಯತ್‍ನಲ್ಲಿ ನೀಡಲಾಗಿದೆ.