Kannada Translation

Ayah by Ayah

Tags

Download Links

Kannada Translation translation for Surah Fatir — Ayah 32

35:32
ثُمَّ أَوۡرَثۡنَا ٱلۡكِتَٰبَ ٱلَّذِينَ ٱصۡطَفَيۡنَا مِنۡ عِبَادِنَاۖ فَمِنۡهُمۡ ظَالِمٞ لِّنَفۡسِهِۦ وَمِنۡهُم مُّقۡتَصِدٞ وَمِنۡهُمۡ سَابِقُۢ بِٱلۡخَيۡرَٰتِ بِإِذۡنِ ٱللَّهِۚ ذَٰلِكَ هُوَ ٱلۡفَضۡلُ ٱلۡكَبِيرُ ٣٢
ಅನಂತರ ನಮ್ಮ ದಾಸರಲ್ಲಿ (ಶ್ರೇಷ್ಟರಾಗಿ) ಆಯ್ದುಕೊಂಡವರಿಗೆ ಈ ಗ್ರಂಥವನ್ನು ನಾವು ಉತ್ತರಾಧಿಕಾರವಾಗಿ ಕೊಟ್ಟೆವು. ಆದರೆ ಅವರಲ್ಲಿ ಕೆಲವರು ತನ್ನ ಮೇಲೆ ತಾನೇ ಅಕ್ರಮವೆಸಗಿದವರು. ಕೆಲವರು ಮಿತತ್ವವನ್ನು ಪಾಲಿಸುವವರು. ಇನ್ನು ಕೆಲವರು ಅಲ್ಲಾಹನ ಇಚ್ಛೆಯಂತೆ ಪುಣ್ಯ ಕಾರ್ಯಗಳಲ್ಲಿ ಮುಂದೆ ದಾಟಿ ಹೋದವರು. ಇದುವೇ ಮಹಾ ಅನುಗ್ರಹ1.
Footnotes
  • [1] ಪುಣ್ಯ ಪ್ರವಾದಿವರ್ಯ ರವರ ಸಹಾಬತ್, ತಾಬಿಉಗಳು, ಕೊನೆ ದಿನದವರೆಗೆ ಅವರನ್ನು ಅನುಸರಿಸುವವರನ್ನೊಳಗೊಂಡ ಉಮ್ಮತ್ ಎಂಬುದು ಇಲ್ಲಿನ ``ಆಯ್ದುಕೊಂಡವರು’’ ಎಂಬುದರ ತಾತ್ಪರ್ಯ. (ಕಶ್ಶಾಫ್ 3/481) ಕಡ್ಡಾಯ ಕಾರ್ಯಗಳಲ್ಲಿ ಕೆಲವಲ್ಲಿ ಲೋಪ ತರುವವರೂ ಕೆಲವು ನಿಷೇಧಿತ ಕಾರ್ಯ ಗಳನ್ನು ಮಾಡುವವರೂ ಆಗಿರುತ್ತಾರೆ ಒಂದನೇ ವಿಭಾಗ. ಎರಡನೇ ವಿಭಾಗದವರು ಎಲ್ಲ ಕಡ್ಡಾಯ ಕಾರ್ಯಗಳನ್ನು ನಿರ್ವಹಿಸುವವರೂ ಎಲ್ಲ ನಿಷೇಧ ಕಾರ್ಯಗಳಿಂದ ದೂರವಿರುವವರೂ ಆಗಿರುವರು. ಆದರೆ ಕೆಲವೊಮ್ಮೆ ಧರ್ಮದಲ್ಲಿ ಅಪೇಕ್ಷಣೀಯವಾದುದನ್ನು (ಮುಸ್ತಹಬ್ಬ್) ತ್ಯಜಿಸುವುದು ಹಾಗೂ ಅನಪೇಕ್ಷಿತವಾದುದನ್ನು (ಮಕ್ರೂಹ್) ಮಾಡುವುದು ಮುಂತಾದ ಲೋಪಗಳು ಅವರಿಂದ ಬಂದು ಬಿಡುತ್ತವೆ. ಮೂರನೇ ವಿಭಾಗದವರು ಕಡ್ಡಾಯವನ್ನು ಸಂಪೂರ್ಣ ಪಾಲಿಸಿ ನಿಷೇಧಿತವಾದವುಗಳನ್ನು ಸಂಪೂರ್ಣ ತ್ಯಜಿಸುವುದು ಮಾತ್ರವಲ್ಲದೆ ಅಪೇಕ್ಷಣೀಯವಾದುದನ್ನೂ ತಪ್ಪದೆ ಪಾಲಿಸಿ ಅನಪೇಕ್ಷಿತ ವಾದವುಗಳನ್ನು ಸಂಪೂರ್ಣ ವರ್ಜಿಸುವವರು. ಇವರು ಪದವಿಯಲ್ಲಿ ಅತ್ಯುನ್ನತರು. ಅಲ್ಲಾಹುವಿನ ವಿಶೇಷ ಸಹಾಯದಿಂದ ಅವರು ಆ ಪದವಿಗೇರುವರು. ಆದ್ದರಿಂದಲೇ ಇಲ್ಲಿ `ಅಲ್ಲಾಹುವಿನ ಅನುಮತಿಯೊಂದಿಗೆ’ ಎಂದು ಹೇಳಲಾಗಿದೆ. (ತಫ್ಸೀರ್ ಇಬ್ನು ಕಸೀರ್ 3/554, 555) ಇಮಾಮ್ ಹಸನುಲ್ ಬಸ್ವರಿ ಹೇಳುತ್ತಾರೆ; `ತ್ವರೆ ಮಾಡಿದವನು’ ಪಾಪಗಳಿಗಿಂತ ಪುಣ್ಯಗಳಲ್ಲಿ ಮುಂದೆ ಇರುವವನಾಗಿರುವನು. `ಸ್ವಂತಕ್ಕೆ ಅನ್ಯಾಯ ಮಾಡಿಕೊಂಡವನು’ ಅಂದರೆ ಪುಣ್ಯಗಳಿಗಿಂತ ಪಾಪಗಳು ಹೆಚ್ಚಿದವನಾಗಿರುವನು. `ಮಿತ ಪಾಲಕನು’ ಅಂದರೆ ಪಾಪ - ಪುಣ್ಯಗಳು ಸಮಾನನಾದವನು. ಇವರೆಲ್ಲರೂ ಸ್ವರ್ಗ ಪ್ರವೇಶಕ್ಕೆ ಅರ್ಹತೆ ಪಡೆಯುತ್ತಾರೆ. ಈ ಅಭಿಪ್ರಾಯ ಪ್ರಮಾಣಬದ್ಧವಾಗಿದೆ. ಇಮಾಮ್ ತ್ವಬರಿ ಹಾಗೂ ಮತ್ತೆ ಕೆಲವರೂ ಇದೇ ಅಭಿಪ್ರಾಯದವರು. (ರhೂದುಲ್ ಮಸೀರ್ 6/490)