Kannada Translation

Ayah by Ayah

Tags

Download Links

Kannada Translation translation for Surah Fatir — Ayah 40

35:40
قُلۡ أَرَءَيۡتُمۡ شُرَكَآءَكُمُ ٱلَّذِينَ تَدۡعُونَ مِن دُونِ ٱللَّهِ أَرُونِي مَاذَا خَلَقُواْ مِنَ ٱلۡأَرۡضِ أَمۡ لَهُمۡ شِرۡكٞ فِي ٱلسَّمَٰوَٰتِ أَمۡ ءَاتَيۡنَٰهُمۡ كِتَٰبٗا فَهُمۡ عَلَىٰ بَيِّنَتٖ مِّنۡهُۚ بَلۡ إِن يَعِدُ ٱلظَّٰلِمُونَ بَعۡضُهُم بَعۡضًا إِلَّا غُرُورًا ٤٠
(ಪೈಗಂಬರರೇ) ಹೇಳಿರಿ : ನೀವು ಅಲ್ಲಾಹನನ್ನು ಬಿಟ್ಟು ಆರಾಧಿಸುತ್ತಿರುವ ನಿಮ್ಮ ಸಹಭಾಗಿಗ ಳನ್ನು ಕಂಡಿದ್ದೀರಾ? (ಇವರ ಬಗ್ಗೆ ನೀವೇನೆನ್ನುವಿರಿ?) ಅವರು ಭೂಮಿಯಲ್ಲಿ ಏನನ್ನು ಸೃಷ್ಟಿಸಿದ್ದಾರೆ? ಅಥವಾ ಆಕಾಶಗಳಲ್ಲಿ ಅವರ ಪಾಲು ಏನೆಂದು ನನಗೆ ತೋರಿಸಿರಿ. ಇಲ್ಲವೇ ಇವರಿಗೆ ನಾವು ಯಾವುದೇ ವೇದಗ್ರಂಥವನ್ನು (ಪ್ರತ್ಯೇಕವಾಗಿ) ಕೊಟ್ಟಿದ್ದೇವೆಯೇ? ಆಮೇಲೆ ಅದರಿಂದ ಯಾವುದೇ ಆಧಾರದ ಮೇಲೆ ಅವರು ನೆಲೆ ಗೊಂಡಿದ್ದಾರೆಯೇ?1 ಇಲ್ಲ. ಅಕ್ರಮಿಗಳು ಪರಸ್ಪರ ಮೋಸದ ಭರವಸೆಗಳನ್ನು ಮಾತ್ರ ನೀಡಬಲ್ಲರು.
Footnotes
  • [1] ನೀವು ದೇವರುಗಳೆಂದು ಕರೆಯುವ ಈ ವಿಗ್ರಹಗಳು ಈಗಿರುವ ಸ್ಥಿತಿಯಲ್ಲಿ ದುರ್ಬಲವೆಂದು ನೀವು ಬಲ್ಲಿರಾ? ಇಲ್ಲವೇ ಅವುಗಳಲ್ಲಿ ಏನಾದರೂ ಸಾಮಾಥ್ರ್ಯವನ್ನು ನೀವು ವೃಥಾ ಕಲ್ಪಿಸಿಕೊಂಡಿದ್ದೀರಾ? ದುರ್ಬಲವೆಂದು ನಿಮಗೆ ತಿಳಿದಿದ್ದರೆ ಅವುಗಳನ್ನು ಹೇಗೆ ನೀವು ಆರಾಧಿಸುವಿರಿ? ಏನಾದರೂ ಸಾಮಾಥ್ರ್ಯವಿದೆ ಎಂದಾದರೂ ಯಾವುದರಲ್ಲಿ ಆ ಸಾಮಾಥ್ರ್ಯವಿದೆ ಎಂಬುದನ್ನು ತಿಳಿಸಿಕೊಡುವಿರಾ? ಭೂಮಿಯಲ್ಲೋ? ಅವಿಶ್ವಾಸಿಗಳಲ್ಲಿ ಕೆಲವರು ‘ಅಲ್ಲಾಹನು ಆಕಾಶದ ದೇವರೆಂದೂ ಇವು ಭೂಮಿಯ ದೇವರುಗಳೆಂದೂ ಹೇಳಿಕೊಳ್ಳುತ್ತಾರೆ. ಭೂಮಿಯ ಕಾರ್ಯಗಳನ್ನು ನಡೆಸುವುದು ನಕ್ಷತ್ರ ಮತ್ತು ವಿಗ್ರಹಗಳು ಅವುಗಳ ಶಿಲ್ಪಗಳು ಎಂಬುದು ಅವರ ವಾದ. ಇವರು ಹೇಳುವಂತೆ ಭೂಮಿಯಲ್ಲಿ ಎಲ್ಲಿ ಅವರ ಸಾಮಥ್ರ್ಯ?. ಬಹುದೇವ ವಿಶ್ವಾಸಿಗಳಲ್ಲಿ ಕೆಲವರು ಹಾಗೆ ಹೇಳುತ್ತಾರೆ. ಮಲಕ್‍ಗಳ ಸಹಾಯದಿಂದ ಆಕಾಶವನ್ನು ಸೃಷ್ಟಿಸಲಾಯಿತೆಂದು ಅದÀರ ನಿರ್ಮಾಣದಲ್ಲಿ ಮಲಕ್‍ಗಳು ಪಾಲುದಾರರೆಂದು ಅವರ ಅಂಬೋಣ. ವಿಗ್ರಹಗಳು ಈ ಮಲಕ್‍ಗಳು ಕೇವಲ ಶಿಲ್ಪಗಳು. ಇನ್ನೇನು? ನಿಮಗಾಗಿ ಶಿಫಾರಸ್ಸು ನಡೆಸುವುದರಲ್ಲೋ ಈ ದೈವಗಳ ಸಾಮಾಥ್ರ್ಯ! ಮುಶ್ರಿಕರಲ್ಲಿ ಕೆಲವರು ಹಾಗೆ ಹೇಳುತ್ತಾರೆ. ಮಲಕ್‍ಗಳು ಏನನ್ನೂ ಸೃಷ್ಟಿಸಲಿಲ್ಲ. ಆದರೆ ಅವರು ಅಲ್ಲಾಹನ ನಿಕಟವರ್ತಿಗಳು ಹೀಗಾಗಿ ಅವರ ಶಿಫಾರಸ್ಸು ಸಿಗಲಿಕ್ಕಾಗಿ ನಾವು ಇವುಗಳನ್ನು ಪೂಜಿಸುತ್ತೇವೆ ಎಂದು ಅವರು ಹೇಳುತ್ತಾರೆ. ಅಲ್ಲಾಹನು ಈ ವಿಗ್ರಹಗಳಿಗೆ ಶೀಫಾರಸಿನ ಅಧಿಕಾರವನ್ನು ಕೊಟ್ಟಿದ್ದಾನೆ ಎನ್ನುವುದಕ್ಕೆ ಯಾವುದಾದರೂ ಲಿಖಿತ ಪುರಾವೆಯಿದೆಯೇ? (ರಾಝಿ 28/33)