Kannada Translation

Ayah by Ayah

Tags

Download Links

Kannada Translation translation for Surah Fatir — Ayah 8

35:8
أَفَمَن زُيِّنَ لَهُۥ سُوٓءُ عَمَلِهِۦ فَرَءَاهُ حَسَنٗاۖ فَإِنَّ ٱللَّهَ يُضِلُّ مَن يَشَآءُ وَيَهۡدِي مَن يَشَآءُۖ فَلَا تَذۡهَبۡ نَفۡسُكَ عَلَيۡهِمۡ حَسَرَٰتٍۚ إِنَّ ٱللَّهَ عَلِيمُۢ بِمَا يَصۡنَعُونَ ٨
ಯಾರಿಗೆ ಅವನ ದುಷ್ಕರ್ಮವು ಚಂದಗೊಂಡು ಕೊನೆಗೆ ಅದು ಉತ್ತಮವಾಗಿ ಕಂಡಿತೋ ಅವನು ಸನ್ಮಾರ್ಗ ಪ್ರಾಪ್ತನಂತೆ ಆಗುವನೇ? ಅಲ್ಲಾಹು ತಾನಿಚ್ಛಿಸಿದವರನ್ನು ದಾರಿ ತಪ್ಪಿಸುತ್ತಾನೆ. ತಾನಿಚ್ಛಿಸಿದವರನ್ನು ನೇರ ದಾರಿಗೆ ತರುತ್ತಾನೆ. ಆದುದರಿಂದ ಇವರ ಮೇಲಿನ ವ್ಯಥೆಯಿಂದ ನಿಮ್ಮ ಪ್ರಾಣ ಹೋಗದಿರಲಿ. ಅಲ್ಲಾಹನು ಇವರು ಮಾಡುತ್ತಿರುವುದನ್ನು ಚೆನ್ನಾಗಿ ಅರಿಯುತ್ತಾನೆ1.
Footnotes
  • [1] ಇಮಾಂ ಲಹ್ಹಾಕ್‍ರವರ ಪ್ರಕಾರ ಈ ಸೂಕ್ತವು ಹಝ್ರತ್ ಉಮರ್ ಹಾಗೂ ಅಬೂಜಹಲನ ಬಗ್ಗೆ ಅವತೀರ್ಣಗೊಂಡಿದೆ. ತಾನು ಮಾಡುವ ಯಾವುದೇ ಕ್ರೂರ ಕೃತ್ಯಗಳು ಅಬೂಜಹಲನಿಗೆ ಹಿತಕರವಾಗುತ್ತಿತ್ತು. ಅವನು ಆ ನಿಷೇಧದಲ್ಲೇ ಮುಂದುವರಿದನು. ಆದರೆ ಉಮರ್‍ರವರು ಇಸ್ಲಾಮಿನ ಬೆಳಕನ್ನು ಸ್ವೀಕರಿಸಿ ನಬಿಯವರ ಹಿಂದೆ ಅಣಿ ನೆರೆದರು. ತಾನಿಚ್ಛಿಸಿದವರನ್ನು ಅಲ್ಲಾಹು ಸತ್ಯಕ್ಕೆ ಸೇರಿಸುವನು. ಅವನ ಕಾರ್ಯ ಚಟುವಟಿಕೆಗಳ ಮಾನದಂಡಗಳ ಬಗ್ಗೆ ಅಲ್ಪಜ್ಞನಾದ ಮಾನವ ಏನೇನೂ ಅರಿಯಲಾರ ಎಂಬ ವಾಸ್ತವಿಕತೆಯನ್ನು ಈ ಸೂಕ್ತದ ಅಂತ್ಯಾಂಶವು ಧ್ವನಿಸುತ್ತದೆ. ಇಂಥವನು ಏಕೆ ಸನ್ಮಾರ್ಗಿಯಾದ? ಇನ್ನೊಬ್ಬ ಏಕೆ ದುರ್ಮಾರ್ಗಿಯಾದ? ಅಲ್ಲಾಹನ ಬಳಿ ಇದಕ್ಕೆ ಸ್ಪಷ್ಟ ಉತ್ತರವಿದೆ. ಅಲ್ಲಾಹನ ಯುಕ್ತಿಯನ್ನು ಬಲ್ಲವರಾರು?