Kannada Translation

Ayah by Ayah

Tags

Download Links

Kannada Translation translation for Surah Ya-Sin — Ayah 16

36:16
قَالُواْ رَبُّنَا يَعۡلَمُ إِنَّآ إِلَيۡكُمۡ لَمُرۡسَلُونَ ١٦
ಸಂದೇಶವಾಹಕರು ಹೇಳಿದರು, ‘ನಾವು ಖಂಡಿತ ವಾಗಿಯೂ ನಿಮ್ಮ ಕಡೆಗೆ ಕಳುಹಿಸಲಾದ ಸಂದೇಶ ವಾಹಕರೆಂದು ನಮ್ಮ ಪ್ರಭು ತಿಳಿದಿದ್ದಾನೆ.1
Footnotes
  • [1] ಇಲ್ಲಿನ ಪ್ರತಿಪಾದನೆಯ ಬಾಹ್ಯ ಶೈಲಿ ಪ್ರಕಾರ ಇವರು ಈಸಾ ನಬಿಯವರ ದೂತರಾಗಿರಲಿಲ್ಲ. ಅಲ್ಲಾಹನಿಂದಲೇ ನಿಯುಕ್ತರಾದ ಮುರ್ಸಲ್‍ಗಳಾಗಿದ್ದರು ಎಂಬುದು ವ್ಯಕ್ತ. ನಾಡಿನವರು ನೀವು ನಮ್ಮಂತಹ ಮನುಷ್ಯರಲ್ಲದೆ ಇನ್ನೇನು ಅಲ್ಲ ಎಂದು ಹೇಳಿದ ಮಾತು ಈ ಅಭಿಪ್ರಾಯಕ್ಕೆ ಪುಷ್ಟಿ ನೀಡುತ್ತದೆ. ಮೊದಲು ಕಳುಹಿಸಲಾದ ಮುರ್ಸಲ್‍ಗಳ ಹೆಸರು ಸಾದಿಕ್ ಮತ್ತು ಮಸ್ದೂಕ್. ಮೂರನೆಯ ವ್ಯಕ್ತಿಯ ಹೆಸರು ಶಂಊನ್ ಎಂದಾಗಿತ್ತು. ಇನ್ನೊಂದು ಅಭಿಪ್ರಾಯ ಪ್ರಕಾರ ಅವರು ಈಸಾ ನಬಿಯವರ ನಿಕಟವರ್ತಿಗಳಾಗಿದ್ದ ಹವಾರಿಗಳ ಕೂಟಕ್ಕೆ ಸೇರಿದ್ದ ಸಾತ್ವ್ವಿಕರಾಗಿದ್ದರು. ಆದರೆ ಪ್ರಸ್ತುತ ನಾಡು ಅಂಥಾಕಿಯಾ ಎಂಬ ಅಭಿಪ್ರಾಯವು ಕೆಲವು ವಾಸ್ತವಿಕತೆಗಳಿಗೆ ವಿರುದ್ಧವಾಗಿದೆ. ಅದೇನೆಂದರೆ ಈಸಾ ನಬಿಯವರನ್ನು ಅಂಗೀಕರಿಸಿದ ಪ್ರಥಮ ನಾಡು ಎಂಬ ಕೀರ್ತಿ ಅಂಥಾಕಿಯಾಕ್ಕಿದೆ. ತೌರಾತ್ ಬಂದ ನಂತರ ಯಾವ ನಾಡೂ ದೇವಶಿಕ್ಷೆಯಿಂದ ಸರ್ವನಾಶವಾಗಿಲ್ಲ ಎಂದು ಅಬೂಸಈದಿಲ್ ಕುದ್‍ರಿ ಹಾಗೂ ಇನ್ನಿತರ ಕೆಲವು ಮಹಾತ್ಮರು ಪ್ರಸ್ತಾಪಿಸಿದ್ದಾರೆ. ಆದರೆ ಇಲ್ಲಿ ಪ್ರಸ್ತಾಪಿತವಾದ ಊರವರು ಮುರ್ಸಲ್‍ಗಳನ್ನು ಧಿಕ್ಕರಿಸಿದ ಕಾರಣದಿಂದ ನಿರ್ವಂಶವಾಗುತ್ತಾರೆ. ಆದ್ದರಿಂದ ಆ ಊರು ಅಂಥಾಕಿಯ ಆಗಲು ಸಾಧ್ಯತೆಯಿಲ್ಲ. ಒಂದು ವೇಳೆ ನಾಶವಾದ ಈ ಬೇರೆ ಊರು ಆ ಕಾಲದಲ್ಲಿ ಅಂಥಾಕಿಯಾ ಎಂದು ಕರೆಯಲ್ಪಡುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. (ಇಬ್ನು ಕಸೀರ್)