Kannada Translation

Ayah by Ayah

Tags

Download Links

Kannada Translation translation for Surah Ya-Sin — Ayah 20

36:20
وَجَآءَ مِنۡ أَقۡصَا ٱلۡمَدِينَةِ رَجُلٞ يَسۡعَىٰ قَالَ يَٰقَوۡمِ ٱتَّبِعُواْ ٱلۡمُرۡسَلِينَ ٢٠
ನಗರದ ಕೊನೆಯ ಅಂಚಿನಿಂದ ಒಬ್ಬನು1 ಓಡುತ್ತಾ ಬಂದು ಹೀಗೆಂದನು, “ಓ ನನ್ನ ಜನಾಂಗದವರೇ, ನೀವು ಈ ಸಂದೇಶವಾಹಕರನ್ನು ಅನುಸರಿಸಿರಿ.
Footnotes
  • [1] ಆ ಮಹಾತ್ಮರ ಹೆಸರು ಹಬೀಬುನ್ನಜ್ಜಾರ್. ಮೊದಲು ಅವರು ವಿಗ್ರಹ ನಿರ್ಮಾಪಕರಾಗಿದ್ದರು. ಅಲ್ಲಾಹನ ಮೊದಲ ಇಬ್ಬರು ದೂತರು ಅಂಥಾಕಿಯಕ್ಕೆ ಕಾಲಿರಿಸಿದಾಗ ಮೊದಲು ಭೇಟಿಯಾದುದು ಈ ವ್ಯಕ್ತಿ. ಆಡುಗಳನ್ನು ಮೇಯಿಸುತ್ತಾ ಇದ್ದಾಗ ಅವರಿಬ್ಬರು ಬಂದರು. ವಿಚಾರಿಸಿದಾಗ ಅವರು ಬಂದ ಉದ್ದೇಶವನ್ನು ಹೇಳಿದರು. ನಿಮ್ಮ ಧರ್ಮಕ್ಕೆ ಆಧಾರವೇನಿದೆ ಎಂದು ಕೇಳಿದಾಗ ಅವರಿಬ್ಬರೂ ತಮ್ಮ ಪವಾಡದ ಬಗ್ಗೆ ಹೇಳಿದ್ದರು. ಹಾಗಾದರೆ ನನ್ನ ಪುತ್ರನೊಬ್ಬ ಹಲವು ಕಾಲದಿಂದ ಕಾಯಿಲೆ ಬಿದ್ದಿರುತ್ತಾನೆ. ಅವನಿಗೆ ವಾಸಿ ಮಾಡಬಲ್ಲಿರಾ? ಎಂದು ಕೇಳಿದಾಗ ಇಬ್ಬರೂ ಅವರ ಮನೆಗೆ ತೆರಳಿ ರೋಗ ಪೀಡಿತ ಮಗನ ಮೈ ಸವರಿದಾಗ ತಕ್ಷಣ ಗುಣಮುಖನಾಗಿ ಎದ್ದು ನಿಂತನು. ಆ ಕೂಡಲೇ ಹಬೀಬುನ್ನಜ್ಜಾರ್ ಸತ್ಯಧರ್ಮವನ್ನು ಸ್ವೀಕರಿಸಿದ್ದರು. ಅವರ ನಿವಾಸವು ನಗರದ ಕಟ್ಟ ಕಡೆಯ ಅಂಚಿನಲ್ಲಿತ್ತು. ಅಲ್ಲಿಂದ ದೂತರಿಬ್ಬರೂ ನಾಡಿನ ಹೃದಯ ಭಾಗಕ್ಕೆ ಬಂದು ಧರ್ಮ ಬೋಧನೆಗಿಳಿದಿದ್ದರು. ಹಬೀಬುನ್ನಜ್ಜಾರ್ ಸತ್ಯಧರ್ಮದಲ್ಲಿ ನೆಲೆನಿಂತು ಸತತ ಆರಾಧನೆ, ಪ್ರಾರ್ಥನೆಗಳ ಮೂಲಕ ಉನ್ನತಿಗೇರ ತೊಡಗಿದ್ದರು. ನಗರ ಮಧ್ಯಕ್ಕೆ ಮೂರನೇ ದೂತರು ಆಗಮಿಸಿದ ಹಾಗೂ ಜನರು ಅವರನ್ನು ತಿರಸ್ಕರಿಸುತ್ತಿರುವ ಸಂಭವಗಳ ಬಗ್ಗೆ ತಿಳಿದಾಗ ಹಬೀಬುನ್ನಜ್ಜಾರ್ ನಗರ ಮಧ್ಯಕ್ಕೆ ಬಂದು “ಈ ದೂತರು ಬೋಧಿಸುತ್ತಿರುವ ಧರ್ಮವು ಸತ್ಯವೆಂದು ಹೇಳುತ್ತಾ ಎಲ್ಲರೂ ಸತ್ಯಧರ್ಮ ಸ್ವೀಕರಿಸಬೇಕೆಂದು ಕರೆಕೊಟ್ಟರು. ಆದರೆ ಊರಿನ ದುರಹಂಕಾರಿ ಜನರು ಹಬೀಬುನ್ನಜ್ಜಾರರನ್ನು ಹಿಡಿದು ಕಲ್ಲೆಸೆದು ಕೊಂದು ಬಿಟ್ಟರು. (ಖುರ್ತುಬಿ 15/18)