Kannada Translation

Ayah by Ayah

Tags

Download Links

Kannada Translation translation for Surah Ya-Sin — Ayah 52

36:52
قَالُواْ يَٰوَيۡلَنَا مَنۢ بَعَثَنَا مِن مَّرۡقَدِنَاۜۗ هَٰذَا مَا وَعَدَ ٱلرَّحۡمَٰنُ وَصَدَقَ ٱلۡمُرۡسَلُونَ ٥٢
ಇವರು ಕೇಳುವರು; ಅಯ್ಯೋ, ನಮ್ಮ ನಾಶವೇ, ನಮ್ಮನ್ನು ನಮ್ಮ ಶಯನ ಗೃಹದಿಂದ ಎಬ್ಬಿಸಿದವರಾರು?’ ಇದು ದಯಾಮಯನಾದ ಅಲ್ಲಾಹನು ಮಾಡಿದ ವಾಗ್ದಾನವಾಗಿದ್ದು ಸಂದೇಶವಾಹಕರು ಸತ್ಯವನ್ನೇ ಹೇಳಿದ್ದರು1.
Footnotes
  • [1] ಇದು ಸತ್ಯನಿಷೇಧಿಗಳಿಗೆ ಅವರ ಗೋರಿಯಲ್ಲಿರುವ ಶಿಕ್ಷೆಯನ್ನು ನಿರಾಕರಿಸುವುದಿಲ್ಲ. ಏಕೆಂದರೆ ಅದರ ನಂತರದ ಪರಲೋಕದ ಅವಸ್ಥೆಯನ್ನು ನೋಡುವಾಗ ಅವರ ಪಾಲಿಗೆ ಗೋರಿಯ ಸ್ಥಿತಿಯು ಭಯಾನಕ, ಕಠೋರತೆಯಲ್ಲಿ ಶಯನದಂತೆಯೇ ಇರುವುದು. “ಎಂತಹ ವಿನಾಶ!” ಎಂದು ಹೇಳುವ ಪ್ರಸ್ತಾಪÀಕ್ಕೆ ಸತ್ಯವಿಶ್ವಾಸಿಗಳು ಇಲ್ಲವೇ ದೇವಚರರು ನೀಡುವ ಉತ್ತರವಾಗಿದೆ; “ಇದು ದಯಾಮಯನಾದ ಅಲ್ಲಾಹನು ವಾಗ್ದಾನ ಮಾಡಿದ್ದು ಹಾಗೂ ಪ್ರವಾದಿಗಳು ಹೇಳಿದ್ದು ಸತ್ಯ” ಎಂಬ ಮಾತು. (ಇಬ್ನು ಕಸೀರ್ 53/166)