Kannada Translation

Ayah by Ayah

Tags

Download Links

Kannada Translation translation for Surah Ya-Sin — Ayah 60

36:60
۞ أَلَمۡ أَعۡهَدۡ إِلَيۡكُمۡ يَٰبَنِيٓ ءَادَمَ أَن لَّا تَعۡبُدُواْ ٱلشَّيۡطَٰنَۖ إِنَّهُۥ لَكُمۡ عَدُوّٞ مُّبِينٞ ٦٠
ಓ ಆದಮರ ಮಕ್ಕಳೇ, ನಿಮಗೆ ನಾನು ಆದೇ ಶಿಸಲಿಲ್ಲವೇ? ‘ನೀವು ಶೈತಾನನಿಗೆ ಆರಾಧಿಸ ಬೇಡಿರಿ,1 ಅವನು ನಿಮ್ಮ ಪ್ರತ್ಯಕ್ಷ ಶತ್ರುವಾಗಿ ರುವನು.
Footnotes
  • [1] ಲಾ ತಅïಬುದೂ - ಶ್ಶಯ್‍ತಾನ (ಶೈತಾನನನ್ನು ಆರಾಧಿಸಬೇಡಿರಿ) ಎಂಬುದರ ಅರ್ಥ `ಆತನನ್ನು ಅನುಸರಿಸಬೇಡಿರಿ, ಅವನಿಗೆ ಮಣಿಯಬೇಡಿರಿ ಎಂದಾಗಿದೆ. ಏಕೆಂದರೆ ಆತನಿಗೆ ಸಾಷ್ಟಾಂಗವೆರಗುವುದು ಮಾತ್ರ ನಿಷಿದ್ಧವಲ್ಲ. ಪರಂತು ಅವನ ಆಜ್ಞೆಗೆ ವಿಧೇಯತ್ವ ಹಾಗೂ ಅವನ ಅನುಸರಣೆ ಕೂಡಾ ನಿಷಿದ್ಧವಾಗಿದೆ. ಆದ್ದರಿಂದ ಅನುಸರಣೆಯು ಆರಾಧನೆಯಾಗಿರುತ್ತದೆ. ಅಂದ ಮೇಲೆ `ಅಲ್ಲಾಹನನ್ನು ಅನುಸರಿಸಿರಿ, ರಸೂಲರನ್ನೂ ನಿಮ್ಮ ಪೈಕಿ `ಊಲುಲ್ ಅಮ್ರ್’ರನ್ನೂ ಅನುಸರಿಸಿರಿ’ (4:59) ಎಂಬ ಸೂಕ್ತದಲ್ಲಿ ಅವರನ್ನು ಆರಾಧಿಸುವಂತೆ ನಮ್ಮಲ್ಲಿ ಆಜ್ಞಾಪಿಸಲಾಗಿದೆ ಎನ್ನುವಂತಿಲ್ಲ. ಏಕೆಂದರೆ ಅವರ ಅನುಸರಣೆಯು ಅಲ್ಲಾಹನ ಆಜ್ಞೆಯ ಪ್ರಕಾರವಾಗಿದ್ದರೆ ಅದು ಅಲ್ಲಾಹನ ಆರಾಧನೆ ಮತ್ತು ಆತನ ಅನುಸರಣೆಯೇ ಆಗುವುದು. ಅಷ್ಟೇ ಏಕೆ? ಅಲ್ಲಾಹೇ ತರರಿಗೆ ಸಾಕ್ಷಾತ್ ಸುಜೂದ್ ಹಾಗೂ ರುಕೂಅï ಕೂಡಾ ಅಲ್ಲಾಹನ ಆಜ್ಞೆಯ ಪ್ರಕಾರವಾಗಿದ್ದರೆ ಅದು ಅಲ್ಲಾಹನಿಗೆ ಆರಾಧನೆಯೇ ಆಗುತ್ತದೆ. ನೋಡಿರಿ, ದೇವಚರರು ಆದಮರಿಗೆ ಸುಜೂದ್ ಮಾಡಿದರು. ಅದು ಅಲ್ಲಾಹನ ಹೊರತು ಇನ್ಯಾರದೇ ಆರಾಧನೆ ಆಗಿರಲಿಲ್ಲ. ಅಂದ ಮೇಲೆ ನಾಯಕರ ಇಬಾದತ್ ಎಂದರೆ ಅದು ಅಲ್ಲಾಹನು ಅನುಮತಿ ನೀಡಿರದ ವಿಷಯಗಳಲ್ಲಿ ಅವರನ್ನು ಅನುಸರಿಸುವುದು ಮಾತ್ರವಾಗಿದೆ. (ರಾಝಿ 27/96)