Kannada Translation

Ayah by Ayah

Tags

Download Links

Kannada Translation translation for Surah As-Saffat — Ayah 10

37:10
إِلَّا مَنۡ خَطِفَ ٱلۡخَطۡفَةَ فَأَتۡبَعَهُۥ شِهَابٞ ثَاقِبٞ ١٠
ಆದರೂ ಅವರ ಪೈಕಿ ಯಾರಾದರೂ ಕದ್ದಾಲಿಸಿದರೆ ತೂರಿ ಬರುವ ತೀಕ್ಷ್ಣ ಜ್ವಾಲೆಯು ಅವರನ್ನು ಬೆನ್ನಟ್ಟುತ್ತದೆ1.
Footnotes
  • [1] `ಶಿಹಾಬ್’ಗೆ ಹೊಳೆಯುತ್ತಿರುವ ಈಟಿ, ಅಗ್ನಿ ಬಾಣ, ಬೆಂಕಿ ಜ್ವಾಲೆ ಮುಂತಾದ ಹಲವು ಅರ್ಥಗಳಿವೆ. ಇಲ್ಲಿ ನಕ್ಷತ್ರದಿಂದ ಸಿಡಿದೇಳುವ ಒಂದು ಜ್ವಾಲೆ ಎಂಬ ಅರ್ಥವನ್ನು ನೀಡಲಾಗುತ್ತಿದೆ. ‘ಸಾಕಿಬ್’ (ರಭಸದ) ಎಂಬ ವಿಶೇಷಣವನ್ನು ಇಲ್ಲಿ ಈ ಬಾಣಕ್ಕೆ ನೀಡಲಾಗಿದೆ. ಪಿಶಾಚಿಗಳೂ ಅಗ್ನಿಯಿಂದ ಸೃಷ್ಟಿಸಲ್ಪಟ್ಟವುಗಳು. ಅಂತಹ ಪಿಶಾಚಿಗಳನ್ನು ಅಗ್ನಿಜ್ವಾಲೆಗಳು ಸಾಯಿಸುವುದು ಅದರ ರಭಸದಿಂದಾಗಿರುತ್ತದೆ. ಪಿಶಾಚಿಗಳು ಉಪರಿಲೋಕದ ಸಮುನ್ನತ ಸಮೂಹದಿಂದ ಕದ್ದಾಲಿಕೆಗೆ ಹೋಗುವುದು. ಅಲ್ಲಿ ಅವುಗಳಿಗೆ ಅತಿ ರಭಸದ ಅಗ್ನಿಜ್ವಾಲೆಯಿಂದ ಮಾರಕ ಹೊಡೆತ ತಟ್ಟುವುದು ಮುಂತಾದವುಗಳ ಸ್ವರೂಪ ಹೇಗೆ ಎಂಬುದು ಸಾಮಾನ್ಯ ಮನುಷ್ಯರಿಗೆ ತಿಳಿಯಲಸಾಧ್ಯ. ಆದರೆ ಅಂತಹ ಅದ್ಭುತ ವಿದ್ಯಮಾನ ಜರುಗುತ್ತಿದೆ ಎಂದು ಇಲ್ಲಿ ಹೇಳಿರುವುದರಿಂದ ನಂಬುವುದು ನಮ್ಮ ಬಾಧ್ಯತೆ. ಅಲ್ಲಾಹು, ರಸೂಲ್ ಹೇಳಿದ್ದು ನಮ್ಮ ಪರಿಮಿತ ಬುದ್ಧಿಗೆ ಮನವರಿಕೆಯಾಗಲಿ, ಇಲ್ಲದಿರಲಿ ಅದರಲ್ಲಿ ವಿಶ್ವಾಸ ತಾಳುವುದು ನಮ್ಮ ಕರ್ತವ್ಯ. ಅಲ್ಲಾಹನಿಂದ ನಿರ್ಧಾರವಾದ ಕೆಲವು ತೀರ್ಮಾನಗಳ ಬಗ್ಗೆ ಮಲಾಇಕತ್ ಚರ್ಚೆ ಮಾಡುವರು, ಅದನ್ನು ಕದ್ದಾಲಿಸುವ ಪಿಶಾಚಿಗಳು ತಮ್ಮ ಸೇವಕರಾದ ಭವಿಷ್ಯ ಹೇಳುವ ಜನರಿಗೆ ನೂರು ಸುಳ್ಳು ಸೇರಿಸಿ ತಿಳಿಸಿಕೊಡುವರು. ಕಣಿ ಹೇಳುವವರು ಅದಕ್ಕೆ ಮತ್ತೂ ಸುಳ್ಳು ಸೇರಿಸಿ ಭವಿಷ್ಯ ಹೇಳುವರು. ಅಪರೂಪಕ್ಕೆ ಜ್ಯೋತಿಷಿಗಳ ಮಾತು ಸತ್ಯವಾಗಿ ಪರಿಣಮಿಸುವುದು ಮಲಕ್‍ಗಳಿಂದ ಕದ್ದಾಲಿಸಿದ ಸತ್ಯವಾದ ವರ್ತಮಾನಗಳಾಗಿರುವುದು ಎಂದು ಬುಖಾರಿ ಮತ್ತು ಮುಸ್ಲಿಮ್ ಉಲ್ಲೇಖಿತ ನಬಿ ವಚನಗಳಲ್ಲಿದೆ.