Kannada Translation

Ayah by Ayah

Tags

Download Links

Kannada Translation translation for Surah As-Saffat — Ayah 107

37:107
وَفَدَيۡنَٰهُ بِذِبۡحٍ عَظِيمٖ ١٠٧
ಆ ಬಾಲಕನಿಗೆ ಬದಲಾಗಿ ನಾವು ಒಂದು ಮಹತ್ತರ ಬಲಿದಾನವನ್ನು1 ಪರಿಹಾರವಾಗಿ ಅವರಿಗೆ ಕೊಟ್ಟೆವು.
Footnotes
  • [1] ಮಹತ್ತರ ಬಲಿದಾನವೆಂದರೆ ಬಲಿಪ್ರಾಣಿಯ ಔನತ್ಯವನ್ನು ಸೂಚಿಸುತ್ತದೆ. ಇಬ್ನ್ ಜುಬೈರರ ಪ್ರಕಾರ ಅದು ಹೇಳುವಷ್ಟು ದೊಡ್ಡದಾಗಿತ್ತು. ಅದು ಸ್ವರ್ಗದಲ್ಲಿ ನಲ್ವತ್ತು ಖರೀಫದಷ್ಟು ಮೇಯುತ್ತಿತ್ತು. ಇಬ್ರಾಹೀಮರ ಪುತ್ರರ ಪರವಾಗಿ ಅಲ್ಲಾಹನು ಸ್ವೀಕರಿಸಿದ ಬಲಿ ಎಂಬ ನೆಲೆಯಲ್ಲಿ ಅದರ ಸ್ಥಾನ ಉನ್ನತವಾಗಿತ್ತು. ದ್ಸುಲ್‍ಹಜ್ ತಿಂಗಳ ಹತ್ತರಂದು ಮಿನಾದಲ್ಲಿ ಆ ಬಲಿದಾನ ನಡೆದಿತ್ತು. ಅದೊಂದು ಗಂಡು ಆಡಾಗಿತ್ತು. ಅದು ಹಿಂದೆ ಆದಮರ ಪುತ್ತ ಹಾಬೀಲ ಸಮರ್ಪಿಸಿದ್ದಾಗಿದ್ದು ಅದುವರೆಗೂ ಅದು ಸ್ವರ್ಗದಲ್ಲಿ ಮೇಯುತ್ತಿತ್ತು ಎನ್ನಲಾಗಿದೆ. ಇಂದು ಹಾಜಿಗಳು ಮಕ್ಕಾದಲ್ಲೂ ಉಳಿದವರು ಊರಲ್ಲೂ ನಡೆಸುತ್ತಿರುವ ಕುರ್ಬಾನಿಯಲ್ಲಿ ಅದರ ಸ್ಮರಣೆ ಹಾಗೂ ತ್ಯಾಗಶೀಲತೆಯ ಉದ್ದೇಶ ಕೂಡಾ ಇದೆ.