Kannada Translation

Ayah by Ayah

Tags

Download Links

Kannada Translation translation for Surah As-Saffat — Ayah 142

37:142
فَٱلۡتَقَمَهُ ٱلۡحُوتُ وَهُوَ مُلِيمٞ ١٤٢
ಆಗ ಅವರನ್ನು ಮೀನು ನುಂಗಿ ಹಾಕಿತು. ಅವರು ಆಕ್ಷೇಪಾರ್ಹರಾಗಿ!1
Footnotes
  • [1] ಅಬಖ ಅಂದರೆ ಯಜಮಾನನಿಂದ ಗುಲಾಮ ತಪ್ಪಿಸಿಕೊಂಡು ಹೋದ ಎಂದರ್ಥ. ಮುಲೀಮ್ ಅಂದರೆ ಆಕ್ಷೇಪಾರ್ಹ ಎಂದರ್ಥ. ಯೂನುಸ್ ನಬಿಯವರು ನಾಡು ಬಿಟ್ಟು ಹೋದದ್ದು ಯಜಮಾನನಾದ ಅಲ್ಲಾಹನ ಅನುಮತಿ ಇಲ್ಲದ್ದರಿಂದ ಆಕ್ಷೇಪ ವಿಧೇಯವಾಯಿತು ಎಂದು ಒಟ್ಟು ಸಾರ. ವ್ಯಾಖ್ಯಾನಗಾರರ ಪ್ರಕಾರ ಅವರು ಸಂಚರಿಸುತ್ತಿದ್ದ ಹಡಗು ಬಿರುಗಾಳಿಗೆ ಸಿಲುಕಿತು. ಭಾರ ಕಡಿಮೆ ಮಾಡದೆ ರಕ್ಷೆಯಿಲ್ಲ ಎಂದಾದಾಗ ಕಡಲಿಗೆಸೆಯಲು ಆಯ್ಕೆ ಮಾಡುವ ಉದ್ದೇಶದಿಂದ ಚೀಟಿ ಎತ್ತಿದಾಗ ಯೂನುಸ್ ನಬಿಯವರ ಹೆಸರು ಬಂತು! ತನ್ನ ಈ ಯಾತ್ರೆ ತಪ್ಪು ಎಂದು ದೃಢವಾದಾಗ ಅವರೇ ಸಮುದ್ರಕ್ಕೆ ಹಾರಿದರು. ಅಷ್ಟರಲ್ಲಿ ಒಂದು ತಿಮಿಂಗಿಲ ಅವರನ್ನು ನುಂಗಿ ಬಿಟ್ಟಿತು.