Kannada Translation

Ayah by Ayah

Tags

Download Links

Kannada Translation translation for Surah As-Saffat — Ayah 159

37:159
سُبۡحَٰنَ ٱللَّهِ عَمَّا يَصِفُونَ ١٥٩
ಅಲ್ಲಾಹು ಮತ್ತು ಜಿನ್ನ್‍ಗಳ1 ನಡುವೆ ಇವರು ವಂಶ ಸಂಬಂಧವನ್ನು ಸ್ಥಾಪಿಸಿದರು. ಖಂಡಿತ ಇವರು (ಶಿಕ್ಷೆಗಾಗಿ) ಹಾಜರುಗೊಳಿಸಲ್ಪಡು ವರು ಎಂದು ಜಿನ್ನ್‍ಗಳಿಗೆ ಚೆನ್ನಾಗಿ ತಿಳಿದಿದೆ.
Footnotes
  • [1] “ನಮ್ಮ ಪಂಚೇಂದ್ರಿಯಗಳಿಗೆ ಅನುಭವವಾಗದಂತೆ ಮರೆಯಲ್ಲಿರುವ ಆತ್ಮಿಕ ಜೀವಿಗಳು” ಎಂದಾಗಿದೆ ಜಿನ್ನ್ ಎಂಬುದರ ಒಂದು ಅರ್ಥ. ಈ ಅರ್ಥ ಪ್ರಕಾರ ಮಲಾಇಕತ್ ಹಾಗೂ ಭೂತ ಪಿಶಾಚಿಗಳೂ ‘ಜಿನ್ನ್’ ಎಂಬುದರ ವ್ಯಾಖ್ಯೆಗೆ ಒಳಪಡುತ್ತವೆ. “ಆತ್ಮೀಯ ಜೀವಿಗಳ ಪೈಕಿ ಒಂದು ಪ್ರತ್ಯೇಕ ವಿಭಾಗ” ಎಂಬ ಇನ್ನೊಂದು ಅರ್ಥ ‘ಜಿನ್ನ್’ಗೆ ಇದೆ. ಈ ವಿಂಗಡನೆ ಪ್ರಕಾರ ಆತ್ಮೀಯ ಜೀವಿಗಳ ಪೈಕಿ ಅತ್ಯುತ್ತಮ ವರ್ಗಕ್ಕೆ ಮಲಾಇಕತ್ ಎಂದೂ ಮಧ್ಯಮ ವರ್ಗಕ್ಕೆ ಜಿನ್ನ್ ಎಂದೂ ಅಧÀಮ ವರ್ಗಕ್ಕೆ ಶೈತಾನ್ (ಭೂತ, ಪಿಶಾಚಿ) ಎಂದೂ ಹೆಸರು ಬರುತ್ತದೆ. ಇದು ಇಮಾಮ್ ರಾಗಿಬ್ ರವರು ತನ್ನ ‘ಮುಫ್ರದಾತ್’ನಲ್ಲಿ ನೀಡಿದ ವಿವರಣೆಯ ಸಂಕ್ಷಿಪ್ತ ರೂಪ.