Kannada Translation

Ayah by Ayah

Tags

Download Links

Kannada Translation translation for Surah As-Saffat — Ayah 28

37:28
قَالُوٓاْ إِنَّكُمۡ كُنتُمۡ تَأۡتُونَنَا عَنِ ٱلۡيَمِينِ ٢٨
(ಅನುಯಾಯಿಗಳು) “ನೀವು ನಮ್ಮ ಬಳಿಗೆ ಆಣೆ ಹಾಕುತ್ತ ಬರುತ್ತಿದ್ದೀರಲ್ಲವೆ?” ಎಂದು ಕೇಳುವರು1.
Footnotes
  • [1] ಮೂಲದಲ್ಲಿ `ಯಮೀನ್’ ಎಂಬ ಪದ ಪ್ರಯೋಗವಾಗಿದೆ. ಇದಕ್ಕೆ ಹಲವು ವ್ಯಾಖ್ಯಾನಗಳಿವೆ. 1. ಇಲ್ಲಿ ಅಲಂಕಾರಿಕವಾಗಿ ಇದನ್ನು ಒಳಿತು, ವಿಜಯಕ್ಕೆ ಬಳಸಲಾಗಿದೆ. ಬಲಭಾಗವು ಎಡ ಭಾಗಕ್ಕಿಂತ ಶ್ರೇಷ್ಟವೆಂಬುದು ಸುವಿಧಿತ. ಆಗ ಇದರ ಅರ್ಥ, ``ಹಲವು ಮತಗಳ ಕಡೆಗೆ ನಿಮ್ಮ ಆಹ್ವಾನದ ಉದ್ದೇಶವು ಸತ್ಯಕ್ಕೆ ಸಹಾಯವೆಂದೂ ಸತ್ಯದ ಬಲವರ್ಧನೆಗೆಂದೂ ನೀವು ನಮ್ಮನ್ನು ತಪ್ಪುಕಲ್ಪನೆಗೆ ಈಡುಮಾಡಿ ನಮ್ಮನ್ನು ವಂಚಿಸಿದಿರಿ” ಎಂದಾಗುತ್ತದೆ. 2. ಯಮೀನ್ ಎಂಬುದಕ್ಕೆ ಉತ್ತಮ ಸ್ಥಾನ ಎಂಬರ್ಥವಿದೆ. ಆಗ ಇದರ ಅರ್ಥ, `ನಿಮ್ಮ ಬಳಿ ನಮಗೆ ಉತ್ತಮ ಸ್ಥಾನವಿರುವುದರಿಂದ ನಿಮ್ಮನ್ನು ನಾವು ಅವಲಂಬಿಸಿದ್ದೆವು ಮತ್ತು ನಿಮ್ಮ ಮಾತನ್ನು ಸ್ವೀಕರಿಸಿದೆವು. ಆದರೂ ನೀವು ನಮಗೆ ಮೋಸ ಮಾಡಿದಿರಿ ಎಂದಾಗುತ್ತದೆ. 3. ಅವಿಶ್ವಾಸಿ ಸರದಾರರು ತಾವು ಕರೆಕೊಡುತ್ತಿರುವ ವಿಷಯವು ಸತ್ಯವೆಂದು ದುರ್ಬಲರೊಡನೆ ಆಣೆ ಹಾಕಿ ಹೇಳುತ್ತಿದ್ದರು. ದುರ್ಬಲರು ಅವರನ್ನು ನಂಬಿ ಕೆಟ್ಟರು. ಆಗ ಇದರ ಅರ್ಥ `ನೀವು ಸಮರ್ಪಿಸುತ್ತಿರುವ ಆಣೆ ಹಾಗೂ ವಚನಗಳ ಕಡೆಯಿಂದ’ ಎಂದಾಗುತ್ತದೆ. 4. ಯಮೀನ್ ಎಂಬ ಪದವು ಶಕ್ತಿ ಮತ್ತು ಬಲಾತ್ಕಾರ ಎಂಬುದಕ್ಕೆ ಅಲಂಕಾರಿಕವಾಗಿ ಬಳಸಲಾಗುತ್ತದೆ. ಆಗ ಇದರ ಅರ್ಥವು `ನಿಮ್ಮ ಅಧಿಕಾರ ಬಲ ಹಾಗೂ ಪ್ರಭಾವಗಳಿಂದ ನಮ್ಮನ್ನು ದುರ್ಮಾರ್ಗಕ್ಕೆ ಎಳೆದಿರಿ’ ಎಂದಾಗುತ್ತದೆ. (ರಾಝಿ 26/134)