Kannada Translation

Ayah by Ayah

Tags

Download Links

Kannada Translation translation for Surah As-Saffat — Ayah 65

37:65
طَلۡعُهَا كَأَنَّهُۥ رُءُوسُ ٱلشَّيَٰطِينِ ٦٥
ಅದರ ಗೊನೆಗಳು ಶೈತಾನರ ತಲೆಗಳೋ ಎಂಬಂತಿವೆ1.
Footnotes
  • [1] ಆ ಮರದ ಗೊನೆಗಳು ಪಿಶಾಚಿಯ ತಲೆಗಳಂತೆ ಎಂದು ಉಪಮಿಸಿದ್ದು ಕೂಡಾ ಅದರ ಭೀಭತ್ಸ ರೂಪವನ್ನು ನಾವು ಅಂದಾಜಿಸಿಕೊಳ್ಳಲಿಕ್ಕಾಗಿದೆ. ವಿಕೃತ ರೂಪಗಳನ್ನು “ಪಿಶಾಚಿಯ ತಲೆಯಂತೆ” ಎಂದು ಉಪಮಿಸುವುದು ಅರಬರ ಒಂದು ಶೈಲಿ. ಅದರ ತೀವ್ರ ಕಹಿ, ತೀಕ್ಷ್ಣತೆ, ದುರ್ನಾತ ಎಷ್ಟೇ ಇದ್ದರೂ ಅದನ್ನು ತಿನ್ನುವಷ್ಟು ಕಠಿಣವಾಗಿರುವುದು ನರಕವಾಸಿಗಳ ಹಸಿವು. ತಿಂದ ನಂತರ ಹೊಟ್ಟೆಯೊಳಗೆ ತೀವ್ರ ಸಂಕಟವನ್ನು ಅನುಭವಿಸಬೇಕಾಗುತ್ತದೆ. ಅದು ಹೊಟ್ಟೆಯೊಳಗೆ ಕೊತ ಕೊತ ಕುದಿಯುವುದು ಎಂದು ಖುರ್‍ಆನ್ ಇನ್ನೊಂದು ಕಡೆ ಹೇಳಿದೆ. (44 : 45)