Kannada Translation

Ayah by Ayah

Tags

Download Links

Kannada Translation translation for Surah Sad — Ayah 13

38:13
وَثَمُودُ وَقَوۡمُ لُوطٖ وَأَصۡحَٰبُ لۡـَٔيۡكَةِۚ أُوْلَٰٓئِكَ ٱلۡأَحۡزَابُ ١٣
ಇವರಿಗಿಂತ ಮುಂಚೆ ನೂಹರ ಜನಾಂಗ, ಆದ್, ಮೊಳೆಗಾರ ಫಿರ್‍ಔನ್,1 ಸಮೂದ್, ಲೂಥ್ ಜನಾಂಗ ಮತ್ತು ಐಕದವರು ಸುಳ್ಳಾಗಿಸಿದ್ದಾರೆ. ಅವರು ಸಂಘ ಪರಿವಾರದವರು.
Footnotes
  • [1] ಔತಾದ್ ಅಂದರೆ ಡೇರೆಯ ಹಗ್ಗವನ್ನು ಎಳೆದು ಕಟ್ಟುವ ಗೂಟಗಳು. ಫಿರ್‍ಔನನ ಬಗ್ಗೆ ಇಲ್ಲಿ ಮತ್ತು ಬೇರೆ ಕೆಲವು ಕÀಡೆಗಳಲ್ಲಿ ದ್ಸುಲ್‍ಔತಾದ್ (ಗೂಟದವನು) ಎಂಬ ಪ್ರತಿಪಾದನೆ ಬಂದಿದ್ದು ಇದರ ವ್ಯಾಖ್ಯಾನಗಳು ಈ ಕೆಳಗಿನಂತಿವೆ. 1. ಡೇರೆಯನ್ನು ಗಾಳಿಗೆ ಹಾರಿ ಹೋಗದಂತೆ ಗೂಟಗಳು ಬಲವಾಗಿ ಹಿಡಿದಿರಿಸುವಂತೆ ತನ್ನ ಆಡಳಿತವನ್ನು ಭದ್ರವಾಗಿ ಹಿಡಿದಿಟ್ಟುಕೊಂಡವನು. 2. ಸೈನ್ಯ ಶಕ್ತಿ ಅಪಾರವಿದ್ದವನು. 3. ಜನರನ್ನು ಗೂಟ ಬಡಿದು ಅಮಾನವೀಯವಾಗಿ ಚಿತ್ರಹಿಂಸೆಯ ಮೂಲಕ ಕೊಲ್ಲಿಸುತ್ತಿದ್ದವನು.