Kannada Translation

Ayah by Ayah

Tags

Download Links

Kannada Translation translation for Surah Sad — Ayah 41

38:41
وَٱذۡكُرۡ عَبۡدَنَآ أَيُّوبَ إِذۡ نَادَىٰ رَبَّهُۥٓ أَنِّي مَسَّنِيَ ٱلشَّيۡطَٰنُ بِنُصۡبٖ وَعَذَابٍ ٤١
ನಮ್ಮ ದಾಸ ಅಯ್ಯೂಬರನ್ನು ಸ್ಮರಿಸಿರಿ. ಸಂಕಟ ಹಾಗೂ ಪೀಡನೆಯ ಮೂಲಕ ನನ್ನನ್ನು ಶೈತಾನನು ಸ್ಪರ್ಶಿಸಿದ್ದಾನೆಂದು ಅವರು ತಮ್ಮ ಪ್ರಭುವನ್ನು ಪ್ರಾರ್ಥಿಸಿದ ಸಂದರ್ಭ1.
Footnotes
  • [1] ‘ಶೈತಾನನ ಸ್ಪರ್ಶ’ ಅಂದರೆ ನಾವು ಕಲ್ಪಿಸಿಕೊಳ್ಳುವ ರೀತಿಯಲ್ಲಿರುವ ಭೂತ ಬಾಧೆಯಲ್ಲ. ಕೆಡುಕು ಎಂಬುದಕ್ಕೆ ಶೈತಾನಿಯತ್ ಎಂಬ ಪ್ರಯೋಗದ ರೂಢಿಯಂತೆ ನನಗೆ ಕೆಡುಕು ಬಾಧಿಸಿದೆ ಎಂಬ ಅರ್ಥದಲ್ಲಾಗಿದೆ ಈ ಹೇಳಿಕೆ. ಇದೇ ಚರಿತ್ರೆ ಸೂರಾ `ಅನ್ಬಿಯಾ'ದಲ್ಲಿದ್ದು ಅಲ್ಲಿ ಅಯ್ಯೂಬ್ ನಬಿಯರವರ ಹೇಳಿಕೆ `ನನಗೆ ಕಷ್ಟ ಬಾಧಿಸಿದೆ’ ಎಂದಾಗಿದೆ.