Kannada Translation

Ayah by Ayah

Tags

Download Links

Kannada Translation translation for Surah Sad — Ayah 44

38:44
وَخُذۡ بِيَدِكَ ضِغۡثٗا فَٱضۡرِب بِّهِۦ وَلَا تَحۡنَثۡۗ إِنَّا وَجَدۡنَٰهُ صَابِرٗاۚ نِّعۡمَ ٱلۡعَبۡدُ إِنَّهُۥٓ أَوَّابٞ ٤٤
`ತಾವು ಒಂದು ಹಿಡಿ ಹುಲ್ಲನ್ನು ತೆಗೆದುಕೊಳ್ಳಿರಿ, ಅದರಿಂದ (ಪತ್ನಿಗೆ) ಹೊಡೆಯಿರಿ. ನಿಮ್ಮ ಶಪಥವನ್ನು ಮುರಿಯಬೇಡಿರಿ1. ‘ನಾವು ಅವರನ್ನು ತಾಳ್ಮೆಗಾರರಾಗಿ ಕಂಡೆವು. ಅವರು ಅತ್ಯುತ್ತಮ ದಾಸರು, ತಮ್ಮ ಪ್ರಭುವಿನ ಕಡೆಗೆ ಬಹಳಷ್ಟು ಮರಳುವವರು.
Footnotes
  • [1] ರೋಗಾವಸ್ಥೆಯಲ್ಲಿರುವಾಗ ಸಿಟ್ಟು ಸೆಡವು ಜಾಸ್ತಿ. ತನ್ನ ಶುಶ್ರೂಷೆ ನಡೆಸುವವರ ಮೇಲೇಯೇ ಸಣ್ಣಪುಟ್ಟ ಲೋಪಗಳಿಗೆ ಕೋಪಿಸಿಕೊಳ್ಳುತ್ತಿರುವ ಅನುಭವ. ಅಯ್ಯೂಬ್ ನಬಿಯವರು ಒಮ್ಮೆ ತನ್ನ ಸೇವೆ ಮಾಡುತ್ತಿದ್ದ ಪತ್ನಿಯ ಮೇಲೆ ಕೋಪಿಸಿಕೊಂಡು ನಿನಗೆ ನೂರು ಪೆಟ್ಟು ಕೊಡುವೆ ಎಂದು ಶಪಥ ಮಾಡಿಬಿಟ್ಟರು. ಆಕೆಯ ಲೋಪವೂ ಯಕಃಶ್ಚಿತ್ತಾಗಿತ್ತು. ಆದ್ದರಿಂದ ಆ ಶಪಥವನ್ನು ಹೆಸರಿಗೆ ಮಾತ್ರ ನೆರವೇರಿಸಿದರೆ ಸಾಕು ಎಂದು ಅಲ್ಲಾಹು ನಿರ್ದೇಶಿಸುತ್ತಾನೆ. ನೂರು ಹುಲ್ಲು ಕಡ್ಡಿಗಳನ್ನು ಹಿಡಿದು ಅದರಲ್ಲಿ ಮೆತ್ತಗೆ ಒಂದೇಟು ಕೊಡುವ ಮೂಲಕ ಶಪಥ ಪೂರೈಸುವಂತೆ ನಿರ್ದೇಶಿಸಲಾಯಿತು. ಅಲ್ಲಾಹು ತನ್ನ ಇಷ್ಟಪಾತ್ರರÀಲ್ಲಿ ಅದೆಂತಹ ಕರುಣೆಯುಳ್ಳವನೆಂದು ಇದು ಸೂಚಿಸುತ್ತಿದೆ.