Kannada Translation

Ayah by Ayah

Tags

Download Links

Kannada Translation translation for Surah Sad — Ayah 59

38:59
هَٰذَا فَوۡجٞ مُّقۡتَحِمٞ مَّعَكُمۡ لَا مَرۡحَبَۢا بِهِمۡۚ إِنَّهُمۡ صَالُواْ ٱلنَّارِ ٥٩
ಈ ತುಕಡಿಯು ನಿಮ್ಮ ಜೊತೆಗೇ ತಳ್ಳಿ ಬರುತ್ತಿದೆ. ಅವರಿಗೆ ಯಾವ ಕ್ಷೇಮವೂ ಇಲ್ಲ. ನಿಜವಾಗಿಯೂ ಅವರು ನರಕಕ್ಕೆ ಪ್ರವೇಶಿಸಿಯೇ ಬಿಟ್ಟರು1.
Footnotes
  • [1] ಅಧರ್ಮಕ್ಕೆ ನಾಯಕತ್ವ ವಹಿಸಿದವರನ್ನು ನರಕಕ್ಕೆ ತಳ್ಳಿಹಾಕಲಾದ ಬೆನ್ನಿಗೇ ಅವರ ಅನುಯಾಯಿಗಳ ತಂಡವನ್ನು ನರಕಕ್ಕೆ ತಳ್ಳಲಾಗುವುದು. ‘ಈ ತುಕಡಿಯು ನಿಮ್ಮ ಜೊತೆಗೇ ತಳ್ಳಿ ಬರುತ್ತಿದೆ’ ಎಂದು ಆ ಸಂದರ್ಭದಲ್ಲಿ ನರಕದ ಪಾಳೆಯಗಾರರಾದ ಮಲಕ್‍ಗಳು ಹೇಳುವರು. ಆಗ ನಾಯಕರು. ಅವರಿಗೆ ಕ್ಷೇಮವಿಲ್ಲ. ಅವರು ಬರುವುದು ನರಕಕ್ಕೆ ತಾನೆ? ಎನ್ನುವರು. ಇದನ್ನು ಕೇಳಿಸಿಕೊಳ್ಳುವ ಅನುಯಾಯಿಗಳು; ನಾವು ಮಾತ್ರವಾ? ನೀವು ಇರುವುದು ಎಲ್ಲಿ? ನಿಮಗೆ ಕ್ಷೇಮವಿದೆಯೋ? ನಮಗೆ ಅಧರ್ಮಕ್ಕೆ ನೇತೃತ್ವಕೊಟ್ಟು ನಮ್ಮನ್ನು ಈ ಸ್ಥಿತಿಗೆ ತಂದವರು ನೀವೇ ತಾನೇ? ನಾವೆಲ್ಲರೂ ಈ ನಿಕೃಷ್ಠ ತಾಣದಲ್ಲಿ ಇರುವಂತಾಯಿತಲ್ಲ ಎಂದು ಕೇಳುವರು. ಇವರಿಗೆ ಇಮ್ಮಡಿ ಶಿಕ್ಷೆಕೊಡು ಎಂದು ಅವರು ಅಲ್ಲಾಹನಲ್ಲಿ ಅಪೇಕ್ಷೆಯನ್ನು ಮುಂದಿಡುವರು.