Kannada Translation

Ayah by Ayah

Tags

Download Links

Kannada Translation translation for Surah Sad — Ayah 88

38:88
وَلَتَعۡلَمُنَّ نَبَأَهُۥ بَعۡدَ حِينِۭ ٨٨
ಒಂದು ಕಾಲಾವಧಿಯ ನಂತರ ಇದರ ವೃತ್ತಾಂತ ನಿಮಗೆ ಖಂಡಿತ ತಿಳಿಯುವುದು1.
Footnotes
  • [1] ಒಂದು ಕಾಲಾವಧಿಯ ನಂತರ ಅಂದರೆ ಮರಣದ ವೇಳೆ ಅಥವಾ ಅಂತ್ಯದಿನ ಅಥವಾ ಇಸ್ಲಾಮಿಗೆ ಪ್ರಚಾರ ಸಿದ್ಧಿಸುವುದರೊಂದಿಗೆ ಮುಂತಾದ ವ್ಯಾಖ್ಯಾನಗಳಿವೆ. ವಾಸ್ತವದಲ್ಲಿ ಇವುಗಳಲ್ಲಿ ಪರಸ್ಪರ ವೈರುಧ್ಯವಿಲ್ಲ. ಖುರ್‍ಆನ್ ಪ್ರಭೋಧನೆಯ ಮೊದಲ ಹಂತಗಳಲ್ಲಿ ಅದನ್ನು ನಿರಾಕರಿಸಿದವರೇ ಹೆಚ್ಚು ತಡವಿಲ್ಲದೆಯೇ ಅದರ ಅನುಯಾಯಿಗಳು ಹಾಗೂ ಪ್ರಚಾರಕರಾಗಿ ಮಾರ್ಪಟ್ಟರು. ಖುರ್‍ಆನ್ ಸಾರಿದ ಅನೇಕ ಕಾರ್ಯಗಳನ್ನು ಜಗತ್ತು ಇಂದೂ ಒಂದೊಂದಾಗಿ ಅಂಗೀಕರಿಸುತ್ತಾ ಬರುತ್ತಿದೆ. ಅಲ್ಲದೆ ಪ್ರತಿಯೊಬ್ಬ ವ್ಯಕ್ತಿಯೂ ಈ ಭೌತಿಕ ಜೀವನವನ್ನು ಕೊನೆಗೊಳಿಸುವುದರೊಂದಿಗೆ ನಿಜಸ್ಥಿತಿ ಅವನಿಗೆ ಖಂಡಿತಾ ಮನದಟ್ಟಾಗುವುದು.