Kannada Translation

Ayah by Ayah

Tags

Download Links

Kannada Translation translation for Surah Az-Zumar — Ayah 38

39:38
وَلَئِن سَأَلۡتَهُم مَّنۡ خَلَقَ ٱلسَّمَٰوَٰتِ وَٱلۡأَرۡضَ لَيَقُولُنَّ ٱللَّهُۚ قُلۡ أَفَرَءَيۡتُم مَّا تَدۡعُونَ مِن دُونِ ٱللَّهِ إِنۡ أَرَادَنِيَ ٱللَّهُ بِضُرٍّ هَلۡ هُنَّ كَٰشِفَٰتُ ضُرِّهِۦٓ أَوۡ أَرَادَنِي بِرَحۡمَةٍ هَلۡ هُنَّ مُمۡسِكَٰتُ رَحۡمَتِهِۦۚ قُلۡ حَسۡبِيَ ٱللَّهُۖ عَلَيۡهِ يَتَوَكَّلُ ٱلۡمُتَوَكِّلُونَ ٣٨
ಭೂಮಿ-ಆಕಾಶಗಳನ್ನು ಸೃಷ್ಟಿಸಿದವನಾರೆಂದು ನೀವು ಇವರೊಡನೆ ಕೇಳಿದರೆ, ಅಲ್ಲಾಹನೆಂದು ಇವರು ಖಂಡಿತ ಹೇಳುವರು. ಹೇಳಿರಿ, ‘ಅಲ್ಲಾಹನ ಹೊರತು ನೀವು ಆರಾಧಿಸುವುದನ್ನು ಕೇಳಿ ತಿಳಿದು ನೋಡಿರುವಿರಾ? ಅಲ್ಲಾಹನು ನನಗೇನಾದರೂ ಹಾನಿಯನ್ನು ಉಂಟು ಮಾಡಲಿಚ್ಛಿಸಿದರೆ ಅವನ ಹಾನಿಯಿಂದ ಅವು ನನ್ನನ್ನು ರಕ್ಷಿಸಬಲ್ಲವೇ ಅಥವಾ ಅಲ್ಲಾಹು ನನ್ನ ಮೇಲೆ ಕೃಪೆ ತೋರಲಿಚ್ಛಿಸಿದರೆ ಅವು ಅವನ ಕೃಪೆಯನ್ನು ತಡೆಯಬಲ್ಲವೇ?’ ಹೇಳಿರಿ, ನನಗೆ ಅಲ್ಲಾಹನೇ ಸಾಕು. ಭರವಸೆ ಇಡುವವರು ಅವನ ಮೇಲೆ ಯೇ ಭರವಸೆಯನ್ನಿಡುತ್ತಾರೆ1.
Footnotes
  • [1] ಬಹುದೇವಾರಾಧಕರಿಗೆ ವ್ಯಕ್ತವಾದ ತಾಕೀತು ಹಾಗೂ ಏಕದೇವ ವಿಶ್ವಾಸಿಗಳಿಗೆ ವಾಗ್ದಾನವನ್ನೂ ಕೊಟ್ಟ ಬಳಿಕ ವಿಗ್ರಹ ಪೂಜಕರ ಮಾರ್ಗವು ವ್ಯಾಜವೆಂಬ ಬಗೆಗೆ ಆಧಾರಗಳನ್ನು ಮಂಡಿಸುವತ್ತ ಹೊರಳಲಾಗಿದೆ. ಇದು ಎರಡು ಮೂಲ ತತ್ವಗಳ ತಳಹದಿಯನ್ನು ಹೊಂದಿದೆ. 1. ಬಹುದೇವಾರಾಧಕರು ಸರ್ವಶಕ್ತನೂ ಸರ್ವ ಜಗನ್ನಿಯಾಮಕನೂ ಸಚ್ಚರಿತನೂ ಕೃಪಾಳುವೂ ಆದ ಅಲ್ಲಾಹನ ಅಸ್ತಿತ್ವವನ್ನು ಒಪ್ಪುತ್ತಾರೆ. ಇಂಥ ಆರಾಧ್ಯನೊಬ್ಬನ ಅಸ್ತಿತ್ವದ ಬಗೆಗಿನ ಅರಿವು ಬಹುಸಂಖ್ಯಾತ ಜನರಲ್ಲಿ ಹಾಸುಹೊಕ್ಕಾಗಿವೆ. ಅದರಲ್ಲಿ ಯಾರಿಗೂ ತರ್ಕವಿಲ್ಲ. ಬುದ್ಧಿಯ ನೈಸರ್ಗಿಕ ಬೇಡಿಕೆಯು ಈ ಅರಿವು ಸುಸಂಬದ್ಧವೆಂದು ಸಾಕ್ಷ್ಯವಹಿಸುತ್ತದೆ. ಭೂಮ್ಯಾಕಾಶಗಳ ಚಮತ್ಕಾರಗಳಲ್ಲಿ ಸಸ್ಯಲತಾದಿಗಳ, ಜೀವಜಾಲಗಳ ಅದ್ಭುತಗಳಲ್ಲಿ ಮಾನವನ ದೇಹ ಹಾಗೂ ಅದರ ಅಪೂರ್ವ ಜೋಡಣೆ ಹಾಗೂ ವಿಸ್ಮಯಕಾರಿ ಸುವ್ಯವಸ್ಥೆಗಳಲ್ಲಿ ಚಿಂತಿಸಿ ನೋಡಿದರೆ ಸರ್ವಶಕ್ತನೂ ತಂತ್ರಜ್ಞನೂ ದಯಾಮಯನೂ ಆದ ಆರಾಧ್ಯನೊಬ್ಬನನ್ನು ಒಪ್ಪಲೇಬೇಕಾದುದು ಅನಿವಾರ್ಯವೆಂದು ಅರಿವಾಗುತ್ತದೆ. 2. ಲಾಭ ಹಾಗೂ ಹಾನಿ ಮಾಡಲು ವಿಗ್ರಹಗಳಿಗೆ ಯಾವುದೇ ಶಕ್ತಿಯಿಲ್ಲ. ಇದರಿಂದ ದಯಾವಂತನೂ ಯುಕ್ತಿಜ್ಞನೂ ಸರ್ವಜ್ಞನೂ ಆದ ಅಲ್ಲಾಹನ ಅಸ್ತಿತ್ವವನ್ನು ಒಪ್ಪಿಕೊಳ್ಳುವುದು ಅನಿವಾರ್ಯವೆಂದೂ, ಲಾಭ, ಹಾನಿಯನ್ನುಂಟುಮಾಡಲು ವಿಗ್ರಹಗಳಿಗೆ ಸಾಧ್ಯವಿಲ್ಲವೆಂದೂ ಸಾಬೀತಾಯಿತು. ವಸ್ತುಸ್ಥಿತಿ ಹೀಗಿರುವಾಗ ಅಲ್ಲಾಹನ ಆರಾಧನೆ ಸ್ಥಿರವಾದರೆ ಬುದ್ಧಿವಂತನು ಮುಶ್ರಿಕನ ಬೆದರಿಕೆಗೆ ಕಿವಿಗೊಡಲಾರ. ಹೀಗಾಗಿ ಈ ಸೂಕ್ತದ ಉದ್ದೇಶವು ಈ ಮೊದಲು ಹೇಳಲಾದ ‘ಇವರು ಅವನ ಹೊರತಾಗಿರುವ ಇತರರ ಬಗ್ಗೆ ನಿಮ್ಮನ್ನು ಹೆದರಿಸುತ್ತಾರೆ’. (39-36) ಎಂಬ ಮಾತಿನ ಉತ್ತರಕ್ಕಿರುವ ಸಂಕೇತವಾಗುತ್ತದೆ. (ರಾಝೀ 13/283)