Kannada Translation

Ayah by Ayah

Tags

Download Links

Kannada Translation translation for Surah Az-Zumar — Ayah 45

39:45
وَإِذَا ذُكِرَ ٱللَّهُ وَحۡدَهُ ٱشۡمَأَزَّتۡ قُلُوبُ ٱلَّذِينَ لَا يُؤۡمِنُونَ بِٱلۡأٓخِرَةِۖ وَإِذَا ذُكِرَ ٱلَّذِينَ مِن دُونِهِۦٓ إِذَا هُمۡ يَسۡتَبۡشِرُونَ ٤٥
ಅಲ್ಲಾಹನ ಬಗ್ಗೆ ಮಾತ್ರ ಪ್ರತಿಪಾದಿಸಲಾದರೆ ಪರಲೋಕದ ಮೇಲೆ ವಿಶ್ವಾಸವಿಲ್ಲದವರ ಹೃದಯಗಳು ಅಸ್ವಸ್ಥಗೊಳ್ಳುತ್ತವೆ. ಅವನ ಹೊರತು ಇತರರ ಪ್ರಸ್ತಾಪವೆತ್ತಿದರೆ ಅವರು ತಕ್ಷಣ ಸಂತುಷ್ಟಗೊಳ್ಳುತ್ತಾರೆ1.
Footnotes
  • [1] ಲಾಇಲಾಹ ಇಲ್ಲಲ್ಲಾಹು ವಹ್ದಹೂ (ಅಲ್ಲಾಹನಲ್ಲದೆ ಅನ್ಯ ದೇವನಿಲ್ಲ, ಅಲ್ಲಾಹನು ಏಕನು) ಎಂದು ಹೇಳುವುದು ಕೇಳಿದಾಗ ಅವರು ಅಸಹನೆ ತೋರುವುದು ಹಾಗೂ ಅವರ ದೈವಗಳನ್ನು ಹೇಳುವಾಗ ಅಥವಾ ದೈವಗಳನ್ನು ಅಲ್ಲಾಹನಿಗೆ ಸೇರಿಸಿ ಹೇಳಿದಾಗ ಮಾತ್ರ ಅವರು ಸಂತುಷ್ಟರಾಗುವುದು ಅವರ ಇನ್ನೊಂದು ಅವಿವೇಕ ಎಂದು ತಾತ್ಪರ್ಯ. ಅಲ್ಲಾಹನ ಇಷ್ಟದಾಸರಾದ ಮಹಾತ್ಮರ ಹೆಸರನ್ನು ಕೇಳುವಾಗ ವಿಶ್ವಾಸಿಗಳು ತೃಪ್ತರಾಗುವುದು ಈ ವಿಧಾನಕ್ಕೆ ಸೇರಿದ್ದಲ್ಲ. ಇದು ದೇವಸಮ್ಮತ ರೀತಿಯಲ್ಲಿ ಸೃಷ್ಟಿಗಳಲ್ಲಿ ಸಂಬಂಧ ಸ್ಥಾಪಿಸುವುದರ ಕುರಿತ ಮಾತಲ್ಲ. ಏಕೆಂದರೆ ಅಲ್ಲಾಹನ ಹೆಸರಿನ ಜೊತೆ ಮಹಾತ್ಮರ ಹೆಸರು ಹೇಳುವುದು ಅನಿವಾರ್ಯವಾದ ಸಂದರ್ಭಗಳು ಇವೆ. ಉದಾ: ಶಹಾದತ್ ಕಲಿಮಾದಲ್ಲಿ ಅಲ್ಲಾಹನ ಹೆಸರಿನ ಜೊತೆಗೆ ಮುಹಮ್ಮದ್ ನಬಿ ರ ಹೆಸರು ಹೇಳಲೇಬೇಕಾಗುತ್ತದೆ. ಅದ್ಸಾನ್, ಅತ್ತಹಿಯ್ಯಾತ್, ಖುತ್ಬಃ ಮುಂತಾದ ಆರಾಧನೆಗಳಲ್ಲಿ ಅಲ್ಲಾಹನ ಜೊತೆಗೆ ನಬಿಯವರ ಹೆಸರು ಹೇಳಲೇಬೇಕಾಗುತ್ತದೆ. ದುಆ ಮಾಡುವಾಗ ಅಲ್ಲಾಹನ ಹೆಸರ ಜೊತೆಗೆ ನಬಿಯವರ ಹೆಸರು ಹೇಳದಿದ್ದರೆ ದುಆ ಪರಿಪೂರ್ಣವಲ್ಲ. ಅಲ್ಲಾಹನ ಹೆಸರಿಗೆ ಸೇರಿಸಿ ಸೃಷ್ಟಿಯ ಹೆಸರು ಹೇಳುವುದು ಶಿರ್ಕ್ ಆಗಿದ್ದರೆ ನಬಿಯವರ ಹೆಸರು ಹೇಳುವುದೂ ಶಿರ್ಕ್ ಆಗಬೇಕಿತ್ತು. ನಬಿಯವರೂ ಸೃಷ್ಟಿ ತಾನೆ? ಸೃಷ್ಟಿಯ ಹೆಸರು ಜೊತೆಗಾಗುವುದು ಶಿರ್ಕ್ ಅಲ್ಲ ಎಂದು ಸಾಬೀತಾದರೆ ಮಹಾತ್ಮರ ಬರ್‍ಕತ್‍ಗಾಗಿ ಅವರಿಂದ ಪ್ರಾರ್ಥನೆ ಹಾಗೂ ಅವರಿಗಾಗಿ ಪ್ರಾರ್ಥನೆ ಮಾಡುವ ಸಲುವಾಗಿ ಅಲ್ಲಾಹನ ಹೆಸರಿನ ಜೊತೆಗೆ ಅವರ ಹೆಸರು ಹೇಳುವುದು ತಪ್ಪಲ್ಲ. ಆದರೆ ದಿವ್ಯತ್ವವನ್ನು ಹೊರಿಸಿ ಅಲ್ಲಾಹನ ಹೆಸರು ಮಾತ್ರ ಹೇಳುವ ಸಂದರ್ಭದಲ್ಲಿ. ಉದಾ: ಇನ್‍ಶಾ ಅಲ್ಲಾಹ್ ಹೇಳಬೇಕಾದಲ್ಲಿ ಇನ್‍ಶಾ ಅಲ್ಲಾಹ್ ಎಂದೇ ಹೇಳಬೇಕಾಗಿದೆ. ಅಲ್ಲಿ ನಬಿಯವರದ್ದೋ ಇತರರದ್ದೋ ಹೆಸರು ಸೇರಿಸುವಂತಿಲ್ಲ. ಒಂದು ವೇಳೆ `ಅಲ್ಲಾಹನ ಹಾಗೂ ಅವುಲಿಯಾಗಳ ಸಹಾಯದಿಂದ, ಎಂದು ಯಾರಾದರೂ ಹೇಳಿದರೂ ಅವುಲಿಯಾಗಳನ್ನು ಇಲಾಹ್ ಮಾಡಿಕೊಂಡೋ ಅಲ್ಲಾಹನ ಭಾಗೀದಾರರನ್ನಾಗಿ ಮಾಡಿಕೊಂಡೋ ಅಲ್ಲದಿದ್ದರೆ ಅದರಲ್ಲಿ ಯಾವುದೇ ತಪ್ಪಿಲ್ಲ. ಏಕೆಂದರೆ ಅದು ಅಲ್ಲಾಹನ ಸಹಾಯಕ್ಕೆ ಔಲಿಯಾಗಳು ನಿಮಿತ್ತವೆಂಬ ಅರ್ಥದಲ್ಲಾಗಿರುತ್ತದೆ.