Kannada Translation

Ayah by Ayah

Tags

Download Links

Kannada Translation translation for Surah Az-Zumar — Ayah 55

39:55
وَٱتَّبِعُوٓاْ أَحۡسَنَ مَآ أُنزِلَ إِلَيۡكُم مِّن رَّبِّكُم مِّن قَبۡلِ أَن يَأۡتِيَكُمُ ٱلۡعَذَابُ بَغۡتَةٗ وَأَنتُمۡ لَا تَشۡعُرُونَ ٥٥
ನೀವು ತಿಳಿಯದಂತೆ ಹಠಾತ್ತನೆ ನಿಮಗೆ ಶಿಕ್ಷೆ ಬರುವ ಮುನ್ನ ನಿಮ್ಮ ಪ್ರಭುವಿನ ಕಡೆಯಿಂದ ನಿಮಗೆ ಕಳುಹಿಸಲಾಗಿರುವ ಪೈಕಿ ಅತ್ಯುತ್ತಮವಾದುದನ್ನು ಅನುಸರಿಸಿರಿ1.
Footnotes
  • [1] ಅರ್ಥಾತ್ ಖುರ್‍ಆನನ್ನು ಅನುಸರಿಸಿರಿ. ಇದರ ಇನ್ನೊಂದು ಅರ್ಥವೇನೆಂದರೆ, ಅಲ್ಲಾಹನ ಆದೇಶವನ್ನು ಪಾಲಿಸಿರಿ ಮತ್ತು ಅಲ್ಲಾಹನ ತಡೆಯಾಜ್ಞೆಯಿಂದ ದೂರವಿರಿ. ಖುರ್‍ಆನನ್ನು ಮೂರು ಪ್ರಕಾರಗಳಲ್ಲಿ ಅವತೀರ್ಣಗೊಳಿಸಲಾಗಿದೆ. ಅಂದರೆ ದೂರವಿರಲಿಕ್ಕಾಗಿ ಅದು ಕೆಲವು ಕೆಡುಕನ್ನೂ, ಅವಗಣಿಸಲಿಕ್ಕಾಗಿ ಅತ್ಯಂತ ಕೆಟ್ಟ ಕಾರ್ಯವನ್ನೂ ಹೇಳಿದೆ ಮತ್ತು ದೇವಭಕ್ತಿ ಹಾಗೂ ಧರ್ಮ ನಿಷ್ಠೆಯಿಂದ ಬದುಕಲಿಕ್ಕಾಗಿ ಅತ್ಯುತ್ತಮ ಕಾರ್ಯವನ್ನೂ ಹೇಳಿದೆ. ಆದ್ದರಿಂದ ಇದರ ತಾತ್ಪರ್ಯ ಅಲ್ಲಾಹನ ಅಂಥ ಅತ್ಯುತ್ತಮ ವಿಧಿ - ಆದೇಶಗಳನ್ನು ಪಾಲಿಸಿರಿ ಎಂದಾಗುತ್ತದೆ. (ರಾಝಿ 27/6)