Kannada Translation

Ayah by Ayah

Tags

Download Links

Kannada Translation translation for Surah Ghafir — Ayah 43

40:43
لَا جَرَمَ أَنَّمَا تَدۡعُونَنِيٓ إِلَيۡهِ لَيۡسَ لَهُۥ دَعۡوَةٞ فِي ٱلدُّنۡيَا وَلَا فِي ٱلۡأٓخِرَةِ وَأَنَّ مَرَدَّنَآ إِلَى ٱللَّهِ وَأَنَّ ٱلۡمُسۡرِفِينَ هُمۡ أَصۡحَٰبُ ٱلنَّارِ ٤٣
ನೀವು ನನ್ನನ್ನು ಯಾವುದರ ಕಡೆಗೆ ಕರೆಯುತ್ತಿರು ವಿರೋ ಅದಕ್ಕೆ ಇಹಲೋಕದಲ್ಲಾಗಲಿ, ಪರಲೋಕದಲ್ಲಾಗಲಿ ಯಾವುದೇ ಪ್ರಾರ್ಥನೆ ಇಲ್ಲ1. ಅಲ್ಲಾಹ ನ ಕಡೆಗೇ ನಮಗೆ ಮರಳಿ ಹೋಗಬೇಕಾಗಿದೆ ಮತ್ತು ಅತಿಕ್ರಮಿಗಳೇ ನರಕವಾಸಿಗಳು ಎನ್ನುವುದರಲ್ಲಿ ಯಾವ ಸಂಶಯವೂ ಇಲ್ಲ.
Footnotes
  • [1] ಅರ್ಥಾತ್ ನಿಮ್ಮ ಆರಾಧ್ಯರಾದ ಮೂರ್ತಿಗಳಿಗೆ ಸ್ವೀಕೃತವಾಗುವ ಪ್ರಾರ್ಥನೆಯಿಲ್ಲ. ಅಂದರೆ ಇಹದಲ್ಲ್ಲಾಗಲಿ ಪರದಲ್ಲಾಗಲಿ ಶಿಪಾರಸ್ಸು ಮಾಡುವ ಅಧಿಕಾರವಿಲ್ಲ. ಸಹಾಯ ಮಾಡುವ ಯಾವುದೇ ಶಕ್ತಿ ಇಲ್ಲ. ಸ್ವಂತಕ್ಕೆ ಕೂಡಾ ಏನೂ ಸಾಧ್ಯವಿಲ್ಲದ ಮೂರ್ತಿಗಳು ನಿಮ್ಮನ್ನು ಅಲ್ಲಿ ರಕ್ಷಿಸುವುದು ಹೇಗೆ? ಇನ್ನೊಂದು ಅರ್ಥ ಪ್ರಕಾರ ತಮಗೆ ಆರಾಧಿಸುವಂತೆ ಕರೆಕೊಡುವ ಅಧಿಕಾರ ಅವರಿಗಿಲ್ಲ. ವಿಗ್ರಹಗಳು ದೇವತ್ವವನ್ನು ವಾದಿಸಿರಲಿಲ್ಲ. ಸ್ವಂತ ಆರಾಧನೆಗೂ ಕರೆ ಕೊಡಲಿಲ್ಲ. ಪರಲೋಕದಲ್ಲಿ ಅವರ ಇಬಾದತ್‍ನಿಂದ ಅವುಗಳು ಮುಕ್ತವಾಗುವುವು.