Kannada Translation

Ayah by Ayah

Tags

Download Links

Kannada Translation translation for Surah Fussilat — Ayah 11

41:11
ثُمَّ ٱسۡتَوَىٰٓ إِلَى ٱلسَّمَآءِ وَهِيَ دُخَانٞ فَقَالَ لَهَا وَلِلۡأَرۡضِ ٱئۡتِيَا طَوۡعًا أَوۡ كَرۡهٗا قَالَتَآ أَتَيۡنَا طَآئِعِينَ ١١
ಅನಂತರ ಅವನು ಆಕಾಶದ ಕಡೆಗೆ ಗಮನ ಹರಿಸಿದನು1. ಅದೊಂದು ದಟ್ಟ ಧೂಮಪಟಲ ವಾಗಿತ್ತು. ಆಗ ಅವನು ಆಕಾಶ-ಭೂಮಿಗಳೊಡನೆ, ‘ನೀವು ವಿಧೇಯರಾಗಿ ಇಲ್ಲವೇ ಬಲಾತ್ಕಾರವಾಗಿ ಬನ್ನಿರಿ’2 ಎಂದನು. ಅವೆರಡೂ, ‘ನಾವು ವಿಧೇಯರಾಗಿ ಬಂದಿದ್ದೇವೆ’ ಎಂದವು.
Footnotes
  • [1] `ಅನಂತರ ಅವನು ಆಕಾಶದತ್ತ ಗಮನಹರಿಸಿದನು' ಎಂಬ ಮಾತಿನಲ್ಲಿರುವ `ಅನಂತರ' ಎಂಬ ಪ್ರಯೋಗದಿಂದ ಭೂಮಿಯ ಸೃಷ್ಟಿಯ ನಂತರ ಆಕಾಶ ಸೃಷ್ಟಿಸಲು ಗಮನ ಹರಿಸಿದನು ಎಂದು ಅರ್ಥ ಕಲ್ಪಿಸಬೇಕೆಂದಿಲ್ಲ. `ನಂತರ' ಎಂಬುದು ಕಾಲಕ್ರಮಕ್ಕೆ ಇರುವಂತೆಯೇ ಪ್ರಸ್ತಾಪದ ಕ್ರಮಕ್ಕೂ ಬರು ತ್ತದೆ. ಆಕಾಶದ ಸೃಷ್ಟಿ ಮೊದಲು ನಡೆದಿದ್ದು ಪ್ರಸ್ತಾಪದಲ್ಲಿ ಮಾತ್ರ `ಅನಂತರ’ ಪ್ರಯೋಗ ಬಂದಿದೆ ಎಂದು ಅರ್ಥೈಸಲೂ ಅವಕಾಶವಿದೆ. ಆಕಾಶ, ಭೂಮಿ ಇವುಗಳ ಪೈಕಿ ಮೊದಲ ಸೃಷ್ಟಿ ಯಾವುದು ಎಂಬ ವಿಷಯದಲ್ಲಿ ಪ್ರಾಮಾಣ್ಯ ಚರ್ಚೆ ಇದೆ. ಆಕಾಶ ಎಂದಾಗಿದೆ ಇಮಾಮ್ ರಾಝಿಯವರ ಸಮರ್ಥನೆ.
  • [2] ಅರ್ಥಾತ್ ಆಕಾಶ ಮತ್ತು ಭೂಮಿಯೊಂದಿಗೆ ಅನುಸರಣಾಭಾವದಿಂದಾದರೂ ಅನಿವಾರ್ಯತೆಯಿಂದಾದರೂ ಬನ್ನಿ ಎಂದು ಅಲ್ಲಾಹನು ಆಜ್ಞಾಪಿಸಿದನು. ಈ ಆದೇಶವು ಒಂದೋ ವಾಸ್ತವಿಕವಾಗಿರಬಹುದು ಅಥವಾ ಆಲಂಕಾರಿಕ ಪ್ರಯೋಗವಾಗಿರಬಹುದು. ಆದರೆ ಭೂಮ್ಯಾಕಾಶಗಳು ಮತ್ತು ಅವುಗಳಲ್ಲಿರುವ ಸರ್ವಸೃಷ್ಟಿಗಳೂ ಅಲ್ಲಾಹನ ವ್ಯವಸ್ಥೆಯಿಂದ ಎಳ್ಳಷ್ಟು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲವೆಂಬುದು ವಾಸ್ತವ. ಮನುಷ್ಯನ ಲಿಂಗಬೇಧ, ಜನನ, ಶೈಶವ, ಬಾಲ್ಯ, ಯೌವ್ವನ, ಮುಪ್ಪು, ಸಾವು, ಗಂಡು-ಹೆಣ್ಣುಗಳ ದೇಹ, ಸ್ವರ, ಬುದ್ಧಿಗಳ ಭಿನ್ನತೆ, ಕಾಲಕ್ರಮೇಣ ದೈಹಿಕ ಬದಲಾವಣೆ, ದುರಂತ, ಸುಖ-ದುಃಖ, ನಿದ್ದೆ ಕನಸು, ರೋಗ ಇವು ಯಾವುದೂ ಮನುಷ್ಯನ ನಿಯಂತ್ರಣದಲ್ಲಿಲ್ಲ. ಇತರ ಪ್ರಾಣಿ ಪಕ್ಷಿಗಳು, ಕಲ್ಲು, ಮಣ್ಣು, ಮರಮಟ್ಟುಗಳು, ಕಡಲು, ಮೋಡ, ಸೂರ್ಯ, ಚಂದ್ರ, ಗ್ರಹ, ನಕ್ಷತ್ರಗಳು ಇವು ಯಾsವುದೂ ದೇವೇಚ್ಛೆ ಹಾಗೂ ದೇವ ನಿಯಂತ್ರಣ ಮೀರಿ ವರ್ತಿಸುವ ಸ್ವಾತಂತ್ರ್ಯ ಹೊಂದಿಲ್ಲ. ಅವುಗಳಿಗೆ ಮನಸ್ಸಿದ್ದರೂ ಇಲ್ಲದಿದ್ದರೂ ದೇವೇಚ್ಛೆಗೆ ವಿಧೇಯವಾಗಲೇಬೇಕಾಗಿದೆ.