Kannada Translation

Ayah by Ayah

Tags

Download Links

Kannada Translation translation for Surah Ash-Shuraa — Ayah 43

42:43
وَلَمَن صَبَرَ وَغَفَرَ إِنَّ ذَٰلِكَ لَمِنۡ عَزۡمِ ٱلۡأُمُورِ ٤٣
ಆದರೆ ಯಾರಾದರೂ ಸಹನೆಯಿಂದ ವರ್ತಿಸಿದರೆ ಹಾಗೂ ಕ್ಷಮಿಸಿದರೆ ಇದೊಂದು ಮನೋದಾಡ್ರ್ಯತೆಯ ಕಾರ್ಯಗಳಲ್ಲಾಗುವುದು1.
Footnotes
  • [1] ಒಂದು ತಪ್ಪಿಗೆ ಪ್ರತೀಕಾರ ಕ್ರಮವನ್ನು ಕೈಗೊಳ್ಳುವಾಗ ಇತ್ತ ಪ್ರವೃತ್ತಿಗೆ ಸಮಾನವಾದುದನ್ನು ಮಾತ್ರವೇ ಅತ್ತ ಕೈಗೊಳ್ಳಬಹುದು. ಅದಕ್ಕಿಂತ ಹೆಚ್ಚಾಗಬಾರದು. 2:194, 16:126 ಎಂಬ ಸೂಕ್ತಗಳಲ್ಲಿ ಈ ವಿಷಯದ ಹೆಚ್ಚಿನ ವಿವರಣೆಯಿದೆ. ಕಣ್ಣಿಗೆ ಕಣ್ಣು, ಹಲ್ಲಿಗೆ ಹಲ್ಲು ಹೀಗೆ ಪ್ರತೀಕಾರ ಕ್ರಮ ಕ್ಲಪ್ತವಾಗಿರಬೇಕು ಎಂಬುದು ನಿಖರ ಸಿದ್ಧಾಂತ. ಅಕ್ರಮಕ್ಕೆ ವಿಧೇಯನಾದವನು ಅಕ್ರಮಿಗೆ ಮಾಫಿ ಮಾಡುವ ಪ್ರೇರಣೆ ಖುರ್‍ಆನಿನಲ್ಲಿ ಹಲವು ಸ್ಥಳಗಳಲ್ಲಿ ಬಂದಿದೆ. ಮಾಫಿ ಮಾಡುವುದರಿಂದ ಮಾತ್ರ ಸಾಕು ಮಾಡದೆ ಪ್ರಚಲಿತ ಹಗೆತನವನ್ನು ಕೊನೆಗೊಳಿಸಿ ಉತ್ತಮ ವರ್ತನೆಯ ಮೂಲಕ ಸ್ನೇಹ ಸಂಬಂಧವನ್ನು ಸ್ಥಾಪಿಸಬೇಕು. 41:34, 35ನೆಯ ವಾಕ್ಯಗಳು ಇಲ್ಲಿ ಸ್ಮರಣಾರ್ಹ. ಅಕ್ರಮಿಗಳನ್ನು ಅಲ್ಲಾಹನು ಇಷ್ಟಪಡಲಾರ ಎಂಬ ಮಾತಿನಲ್ಲಿ ಮೊದಲು ಅಕ್ರಮಿಸಿದವನು ಮಾತ್ರವಲ್ಲ ಪ್ರತೀಕಾರ ಕ್ರಮದಲ್ಲಿ ಹದ್ದು ಮೀರಿದವನೂ ಸೇರುತ್ತಾನೆ. ಅಕ್ರಮಕ್ಕೆ ವಿಧೇಯನಾದವನು ಕಾನೂನುಬದ್ಧವಾಗಿ ಪ್ರತೀಕಾರ ಕ್ರಮವನ್ನು ಕೈಗೊಳ್ಳುವುದನ್ನು ತಡೆಯುವುದಾಗಲಿ ಅದರ ಬಗ್ಗೆ ಆಕ್ಷೇಪಿಸುವುದಾಗಲಿ ಸಲ್ಲದು. ಪರಂತು ವ್ಯಕ್ತಿಗಳನ್ನು ದ್ರೋಹಿಸುವ ಮತ್ತು ಗೊಂದಲ ಸೃಷ್ಟಿಸುವ ಅಕ್ರಮಿಗಳ ವಿರುದ್ಧ ಪ್ರತೀಕಾರ ಕ್ರಮ ಕೈಗೊಳ್ಳುವುದು ಅಗತ್ಯ. ಇದಲ್ಲದೆ ಪರಲೋಕದಲ್ಲಿ ಬೇರೆ ಶಿಕ್ಷೆಯೂ ಕಾದಿದೆ.