Kannada Translation

Ayah by Ayah

Tags

Download Links

Kannada Translation translation for Surah Az-Zukhruf — Ayah 4

43:4
وَإِنَّهُۥ فِيٓ أُمِّ ٱلۡكِتَٰبِ لَدَيۡنَا لَعَلِيٌّ حَكِيمٌ ٤
ವಾಸ್ತವದಲ್ಲಿ ಅದು ಮೂಲಗ್ರಂಥದಲ್ಲಿ1 ಲಿಖಿತವಿದ್ದು ನಮ್ಮ ಬಳಿ ಅತ್ಯುನ್ನತ ಸ್ಥಾನ ಹೊಂದಿರುವ ತತ್ವ ಪೂರ್ಣ ಗ್ರಂಥ.
Footnotes
  • [1] ‘ಉಮ್ಮುಲ್ ಕಿತಾಬ್’ಗೆ ಮೂಲಗ್ರಂಥ, ಒಂದು ಗ್ರಂಥದ ಮೂಲ ವಿಷಯ ಎಂಬ ಎರಡು ಅರ್ಥಗಳಿವೆ. ‘ಈ ಖುರ್‍ಆನ್ ಒಂದು ಸುರಕ್ಷಿತ ಗ್ರಂಥ ದಲ್ಲಿದೆ’ ಎಂದು ಅಲ್-ವಾಖಿಆ ಸೂರಾದಲ್ಲೂ ‘ಒಂದು ಸುರಕ್ಷಿತ ಫಲಕದಲ್ಲಿದೆ’ ಎಂದು ಅಲ್-ಬುರೂಜ್‍ನಲ್ಲೂ “ಮೂಲಗ್ರಂಥ ಅವನ ಬಳಿ ಇದೆ” ಎಂದು ಅರ್ರಅದ್‍ನಲ್ಲೂ ಬಂದಿರುವುದರ ಆಧಾರ ಪ್ರಕಾರ ಉಮ್ಮುಲ್ ಕಿತಾಬ್ ಅಂದರೆ ‘ಲೌಹುಲ್ ಮಹ್‍ಫೂಳ್’ ಇಲ್ಲಿನ ಉದ್ದೇಶವೆಂಬುದು ಸ್ಪಷ್ಟ. ಇನ್ನೊಂದು ವ್ಯಾಖ್ಯಾನ ಪ್ರಕಾರ ಅಲ್ಲಾಹನ ಅನಾದಿಯಾದ ಜ್ಞಾನ ಎಂದಾಗಿದೆ. ಒಟ್ಟಿನಲ್ಲಿ ಖುರ್‍ಆನಿನ ಸಮುನ್ನತ ಸ್ಥಾನವನ್ನು ಇದು ಪ್ರಸ್ತುತಪಡಿಸುತ್ತಿದೆ.