Kannada Translation

Ayah by Ayah

Tags

Download Links

Kannada Translation translation for Surah Az-Zukhruf — Ayah 45

43:45
وَسۡـَٔلۡ مَنۡ أَرۡسَلۡنَا مِن قَبۡلِكَ مِن رُّسُلِنَآ أَجَعَلۡنَا مِن دُونِ ٱلرَّحۡمَٰنِ ءَالِهَةٗ يُعۡبَدُونَ ٤٥
ನಾವು ತಮಗಿಂತ ಮುಂಚೆ ಕಳುಹಿಸಿದ್ದ ನಮ್ಮ ಸಂದೇಶವಾಹಕರುಗಳೊಂದಿಗೆ ತಾವು ಕೇಳಿ ನೋಡಿರಿ1. “ಕಾರುಣ್ಯವಂತನಾದ ಅಲ್ಲಾ ಹನ ಹೊರತು ಆರಾಧಿಸಲ್ಪಡುವ ಯಾವುದೇ ದೇವರುಗಳನ್ನು ನಾವು ನಿಶ್ಚಯಿಸಿದ್ದೇವೆಯೇ?”
Footnotes
  • [1] ಹಿಂದಿನ ಪ್ರವಾದಿಗಳೊಂದಿಗೆ ಕೇಳಿ ಅಂದರೆ ಪೂರ್ವಿಕ ವೇದಗ್ರಂಥಗಳ ಪರಿಶೀಲನೆ ಹಾಗೂ ಅದು ತಿಳಿದವರಲ್ಲಿ ಕೇಳಿ ಎಂದರ್ಥ. ಪ್ರವಾದಿಗಳಲ್ಲೇ ಕೇಳಿ ಎಂಬ ನೇರ ಅರ್ಥ ನೀಡಿದವರೂ ಇದ್ದಾರೆ. ಇಸ್ರಾಅïನ ರಾತ್ರಿ ಬೈತುಲ್ ಮುಖದ್ದಸ್‍ನಲ್ಲಿ ಪೂರ್ವ ಪ್ರವಾದಿಗಳು ಹಾಜರಾಗಿ ನಬಿಯವರು ಅವರಿಗೆ ಇಮಾಮ್ ಆಗಿ ನಮಾಝ್ ನಿರ್ವಹಿಸಿದ್ದರು. ಆ ಸಂದರ್ಭದಲ್ಲಿ ಅವರೊಂದಿಗೆ ನಬಿಯವರು ಕೇಳಿದ್ದರು ಎಂದಾಗಿದೆ ಒಂದು ಅಭಿಪ್ರಾಯ. ಪ್ರಶ್ನೆಯೇ ನಡೆದಿಲ್ಲವೆಂದೂ ಅಲ್ಲಾಹು ಅಲ್ಲದವರಿಗೆ ಆರಾಧಿಸಬೇಕೆಂದು ಯಾವ ಪ್ರವಾದಿಯೂ ಹೇಳಿಯೇ ಇಲ್ಲ ಎಂದು ಅರಬ್ ಮುಶ್ರಿಕರಿಗೆ ದೃಢಪಡಿ ಸುವುದು ಮಾತ್ರ ಇದರ ಉದ್ದೇಶವಾಗಿತ್ತೇ ಹೊರತು; ಕೇಳಬೇಕು ಎಂಬ ಆದೇಶ ಇದರಲ್ಲಿ ಇರಲಿಲ್ಲ ಎನ್ನುವುದು ಮತ್ತೊಂದು ಅಭಿಪ್ರಾಯವಾಗಿದೆ.