Kannada Translation

Ayah by Ayah

Tags

Download Links

Kannada Translation translation for Surah Az-Zukhruf — Ayah 81

43:81
قُلۡ إِن كَانَ لِلرَّحۡمَٰنِ وَلَدٞ فَأَنَا۠ أَوَّلُ ٱلۡعَٰبِدِينَ ٨١
(ಪ್ರವಾದಿಯರೇ) ತಾವು ಹೇಳಿರಿ; ``ಕಾರುಣ್ಯವಂತನಾದ ಅಲ್ಲಾಹನಿಗೆ ಒಂದು ಸಂತಾನವಿರುತ್ತಿದ್ದರೆ ಅದನ್ನು ಆರಾಧಿಸುವವರಲ್ಲಿ ನಾನು ಮೊದಲಿಗ ನಾಗುತ್ತಿದ್ದೆನು’’.1ಂ.
Footnotes
  • [1] 16ಂ. ಅರ್ಥಾತ್ ಅಲ್ಲಾಹನಿಗೆ ಸಂತಾನವಿದೆ ಎನ್ನುವ ವಾದವು ಪುರಾವೆಗಳ ಆಧಾರದಲ್ಲಿ ಸಾಬೀತುಗೊಂಡಿದ್ದರೆ ಅದನ್ನು ಅಂಗೀಕರಿಸುತ್ತಿದ್ದೆ. ಆ ಸಂತತಿಗೂ ಆರಾಧಿಸುವುದು ಕಡ್ಡಾವೆಂದು ನಂಬುತ್ತೆದ್ದೆ. ಆದರೆ ಈ ವಿಷಯದ ಪರವಾಗಿ ಯಾವುದೇ ಪುರಾವೆಗಳಿಲ್ಲ, ಎಂದಷ್ಟೇ ಅಲ್ಲ. ಇದಕ್ಕೆ ವಿರುದ್ಧ ಪ್ರಬಲ ಪುರಾವೆಗಳಿವೆ. ಹೀಗಿರುವಾಗ ಅಲ್ಲಾಹನಿಗೆ ಸಂತಾನವಿದೆಯೆಂಬ ಮಾತನ್ನು ನಾನು ಹೇಗೆ ನಂಬಲಿ. (ರಾಝಿ 27/230)