Kannada Translation

Ayah by Ayah

Tags

Download Links

Kannada Translation translation for Surah Ad-Dukhan — Ayah 10

44:10
فَٱرۡتَقِبۡ يَوۡمَ تَأۡتِي ٱلسَّمَآءُ بِدُخَانٖ مُّبِينٖ ١٠
ಹೀಗಾಗಿ ಆಕಾಶವು ಸ್ಪಷ್ಟವಾದ ಹೊಗೆಯೊಂದಿಗೆ ಬರುವ ದಿನವನ್ನು ನಿರೀಕ್ಷಿಸಿರಿ1.
Footnotes
  • [1] ಹೊಗೆ ಅಂದರೆ ಆವರಿಸುವ ಶಿಕ್ಷೆ. ಮುಶ್ರಿಕರು ಬರಗಾಲದಿಂದ ತತ್ತರಿಸಿದಾಗ ಪ್ರಾರ್ಥಿಸುವಂತೆ ನಬಿಯವರಲ್ಲಿ ಕೇಳಿಕೊಂಡರು. ಕ್ಷೇಮವಾದರೆ ನಾವು ಮುಸ್ಲಿಮರಾಗುತ್ತೇವೆ ಎಂದು ವಚನ ಕೊಟ್ಟರು. ಆದರೆ ನಬಿಯವರ ಪ್ರಾರ್ಥನೆಯಿಂದ ಅವರ ಬರಗಾಲ ಮುಗಿದು ಸುಭಿಕ್ಷೆ ಬಂದಾಗ ವಚನಭಂಗ ಮಾಡಿದರು. ಅವರು ಪೂರ್ವ ಸ್ಥಿತಿಯಲ್ಲೇ ನೆಲೆಗೊಳ್ಳುವರು ಎಂದು ಅಲ್ಲಾಹನು ಮೊದಲೇ ಹೇಳಿದ್ದು ನಿಜವಾಯಿತು. ಅವರ ಈ ವಂಚನೆಗಾಗಿ ಉಗ್ರ ಶಿಕ್ಷೆ ನೀಡಲಾಗುವುದು ಎಂದು 16ನೇ ಆಯತ್ ಇಳಿದು ಬಂತು. ಅದೂ ಜಾರಿಯಾಯಿತು. ಬದ್‍ರ್‍ನಲ್ಲಿ ಅವರು ಅನುಭವಿಸಿದ್ದು ಉಗ್ರ ಶಿಕ್ಷೆಯಾಗಿತ್ತು! ಇದು ಇಬ್ನು ಮಸ್‍ಊದ್ ರವರ ವ್ಯಾಖ್ಯಾನ. ಇಬ್ನು ಅಬ್ಬಾಸ್ ರವರ ವ್ಯಾಖ್ಯಾನ ಪ್ರಕಾರ ಹೊಗೆಯು ಕಿಯಾಮತ್‍ನ ಮುಖ್ಯ ಲಕ್ಷಣಗಳಲ್ಲೊಂದು ಎಂದಾಗಿದೆ ಇಲ್ಲಿನ ಉದ್ದೇಶ. ಉಗ್ರ ಶಿಕ್ಷೆ ಅಂದರೆ ಪುನರುತ್ಥಾನದ ಶಿಕ್ಷೆ.