Kannada Translation

Ayah by Ayah

Tags

Download Links

Kannada Translation translation for Surah Ad-Dukhan — Ayah 28

44:28
كَذَٰلِكَۖ وَأَوۡرَثۡنَٰهَا قَوۡمًا ءَاخَرِينَ ٢٨
(ಅವರ ಅಂತ್ಯ) ಹಾಗೆ ಸಂಭವಿಸಿತು. ನಾವು ಬೇರೊಂದು ಜನತೆಯನ್ನು ಈ ವಸ್ತುಗಳ ವಾರಿಸುದಾರರಾಗಿ ಮಾಡಿದೆವು1.
Footnotes
  • [1] ಅವರ ತೋಟಗಳು, ನದಿಗಳು, ಕೃಷಿ ಸ್ಥಳಗಳು, ಮನೆ ಮಹಲ್ಲುಗಳು ಮುಂತಾದ ಸರ್ವ ಸೊತ್ತು, ಸುಖ ಸೌಕರ್ಯಗಳನ್ನೆಲ್ಲ ಅಲ್ಲಾಹನು ಇನ್ನೊಂದು ಜನಾಂಗದವರಿಗೆ ಕೊಡಮಾಡಿದನು. ಹಾಗೆ ಆ ಅನುಕೂಲ ಪಡೆದವರು ಇಸ್ರಾಯಿಲರು ಎಂದು ಇನ್ನೊಂದು ಆಯತ್‍ನಲ್ಲಿ ವ್ಯಕ್ತಪಡಿಸಲಾಗಿದೆ. ಮರ್ದಕರ ಸರ್ವ ಅನುಕೂಲಗಳನ್ನು ಮರ್ದಿತರಿಗೆ ನೀಡಿದ ಒಂದು ಐತಿಹಾಸಿಕ ಘಟನೆಯಿದು. ಈಜಿಪ್ತಿನಿಂದ ಪ್ಯಾಲೆಸ್ತೀನಿಗೆ ಇಸ್ರಾಯಿಲರು ವಲಸೆ ಬಂದ ಬಳಿಕ ಈಜಿಪ್ಟಿಗೆ ವಾಪಾಸು ಹೋದರೇ ಎಂಬ ವಿಷಯದಲ್ಲಿ ಹಲವು ಅಭಿಪ್ರಾಯಗಳಿವೆ. ಮೂಸಾ ನಬಿಯವರ ಕಾಲ ಕಳೆದ ನಂತರ ಒಂದು ವಿಭಾಗ ಇಸ್ರಾಈಲರು ಈಜಿಪ್ಟಿಗೆ ಮರಳಿದರು. ಮುಂದೆ ದಾವೂದ್ ನಬಿಯವರ ಕಾಲದಲ್ಲಿ ಅವರ ಸಂತತಿಗಳು ಹೋದರು ಎಂಬ ಹಲವು ಅಭಿಪ್ರಾಯಗಳಿದ್ದರೂ ಒಟ್ಟಿನಲ್ಲಿ ಈಜಿಪ್ಟಿನಲ್ಲಿ ಫಿರ್‍ಔನ್ ಮತ್ತು ಅವನ ಪಕ್ಷದವರು ಉಳಿಸಿ ಹೋಗಿದ್ದ ಸೊತ್ತು ವಿತ್ತಗಳು ಇಸ್ರಾಈಲರ ಪಾಲಾದುವು ಎಂಬುದು ಖುರ್‍ಆನಿನ ವಿವರಣೆಯಿಂದ ಖಚಿತವಾಗುತ್ತದೆ.