Kannada Translation

Ayah by Ayah

Tags

Download Links

Kannada Translation translation for Surah Ad-Dukhan — Ayah 3

44:3
إِنَّآ أَنزَلۡنَٰهُ فِي لَيۡلَةٖ مُّبَٰرَكَةٍۚ إِنَّا كُنَّا مُنذِرِينَ ٣
ನಿಶ್ಚಯವಾಗಿಯೂ ನಾವು ಇದನ್ನು ಒಂದು ಅನುಗ್ರಹೀತ ರಾತ್ರಿಯಲ್ಲಿ ಅವತೀರ್ಣಗೊಳಿಸಿದ್ದೇವೆ1. ನಾವು ಜನರಿಗೆ ಮುನ್ನೆಚ್ಚರಿಕೆ ನೀಡುವವರೇ ಆಗಿದ್ದೇವೆ.
Footnotes
  • [1] ‘ಅನುಗ್ರಹೀತ ರಾತ್ರಿ’ಯ ಉದ್ದೇಶ ಲೈಲತುಲ್ ಖದ್‍ರ್ ಎಂದಾಗಿದೆ ಬಹುಮತಾಭಿಪ್ರಾಯ. ‘ಖುರ್‍ಆನನ್ನು ರಮಳಾನಿನಲ್ಲಿ ಇಳಿಸಲಾಗಿದೆ. (ಸೂರ: ಅಲ್-ಬಖರ) ಎಂದೂ ಲೈಲತುಲ್ ಖದ್‍ರ್‍ನಂದು ಇಳಿಸಿದ್ದೇವೆ. (ಸೂರ: ಅಲ್‍ಖದರ್) ಎಂದೂ ಖುರ್‍ಆನಿನಲ್ಲೇ ಇದೆ. ಲೈಲತುಲ್ ಖದ್‍ರ್ ರಮಳಾನಿನಲ್ಲಿ ಎಂಬುದು ಹದೀಸ್‍ಗಳಿಂದ ಸ್ಪಷ್ಟ. ಇಬ್ನುಜರೀರ್ ಈ ಅಭಿಪ್ರಾಯವನ್ನು ಎತ್ತಿ ಹಿಡಿದಿದ್ದಾರೆ. ಶಅïಬಾನ್ ಹದಿನೈದನೇ ರಾತ್ರಿ ಇಲ್ಲಿನ ಉದ್ದೇಶ ಎಂದು ಕೆಲವರು ಅಭಿಪ್ರಾಯಪಟ್ಟಿದ್ದು ಈ ಅಭಿಪ್ರಾಯಕ್ಕೆ ಯಾವುದೇ ಪುರಾವೆಯನ್ನು ನಾನು ಕಂಡಿಲ್ಲ ಎಂದು ಅಲ್ಲಾಮ ನೈಸಾಬೂರಿ, ಗರಾಇಬುಲ್ ಖುರ್‍ಆನ್ ಎಂಬ ತಫ್ಸೀರ್‍ನಲ್ಲಿ ಪ್ರಸ್ತಾಪಿಸಿದ್ದಾರೆ. ಈ ಆಯತ್ ಬರಾಅತ್ ರಾತ್ರಿಯ ಬಗ್ಗೆ ಅಲ್ಲ ಎಂದು ಬಹುಮತಾಭಿಪ್ರಾಯವಿದೆಯೆಂಬ ಕಾರಣದಿಂದ ಬರಾಅತ್ ರಾತ್ರಿಗೆ ಮಹತ್ವವಿಲ್ಲ ಎಂದರ್ಥವಲ್ಲ. ಒಂದು ರಾತ್ರಿಯ ಮಹತ್ವಕ್ಕೆ ಒಂದೇ ಆಯತ್‍ನ ಪುರಾವೆಯೇ ಆಧಾರವಲ್ಲ. ಬರಾಅತ್ ರಾತ್ರಿಯ ಮಹತ್ವದ ಬಗ್ಗೆ ಹಲವು ಹದೀಸ್‍ಗಳಿವೆ. ಆ ಹದೀಸ್‍ಗಳನ್ನು ಉಲ್ಲೇಖಿಸಿದ ಬಳಿಕ ಇಮಾಮ್ ಇಬ್ನುಹಜರಿಲ್ ಹೈತಮೀ ಬರೆಯುತ್ತಾರೆ. “ಒಟ್ಟಿನಲ್ಲಿ ಬರಾಅತ್ ರಾತ್ರಿಗೆ ಮಹತ್ವವಿದೆ. ವಿಶೇಷವಾದ ಪಾಪ ಪರಿಹಾರ ಹಾಗೂ ಪ್ರಾರ್ಥನೆಗೆ ವಿಶೇಷ ಉತ್ತರ ಆ ರಾತ್ರಿಯ ವೈಶಿಷ್ಟ್ಯತೆ. ಆದ್ದರಿಂದಲೇ ಇಮಾಮ್ ಶಾಫಿಈ ಯವರು; ಆ ರಾತ್ರಿ ಪ್ರಾರ್ಥನೆಗೆ ಉತ್ತರವಿದೆ ಎಂದು ಪ್ರಸ್ತಾಪಿಸಿದ್ದು”. (ಫತಾವಲ್ ಕುಬ್‍ರಾ 2: 80)